ಹಾಯ್ ಬೆಂಗಳೂರ್

ಸ್ಪೈಡರ್ ಮ್ಯಾನ್ ಗಳಿಕೆ ಬಿಲಿಯನ್‌ಗಳಲ್ಲಿದೆ

`ಸ್ಪೈಡರ್ ಮ್ಯಾನ್’ ಚಿತ್ರದ ಹೆಸರು ಕೇಳದ ಮಕ್ಕಳೇಕೆ, ಹಿರಿಯರೂ ಕೂಡ ಪ್ರಪಂಚದಲ್ಲಿ ಸಿಗಲಾರರೇನೋ? ಯುವಕನೊಬ್ಬ ತನ್ನ ಶಕ್ತಿಯಿಂದ ಜೇಡದಂತೆ ಪರಿವರ್ತನೆಗೊಂಡು ಎತ್ತರದ ಕಟ್ಟಡಗಳನ್ನು ತನ್ನಲ್ಲಿ ಉತ್ಪಾದನೆಯಾಗುವ ಜೇಡರ ಬಲೆಯಂತಹ ಹಗ್ಗದ ನೆರವು ಪಡೆದು ಜಿಗಿಯುತ್ತ, ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿ ಅವರನ್ನು ರಕ್ಷಿಸುವ ಕ್ಷಣಗಳು ಚಿತ್ರ ನೋಡುವ ಪ್ರತಿ ಮಕ್ಕಳಿಗೂ ಅವಿಸ್ಮರಣೀಯ. ೨೦೦೨ರಲ್ಲಿ ಮೊದಲು ಬಿಡುಗಡೆಗೊಂಡು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದು ಬಾಕ್ಸ್ ಅಫೀಸ್ ಕೊಳ್ಳೆ ಹೊಡೆದ, ನಂತರ ೨೦೦೪ರಲ್ಲಿ `ಸ್ಪೈಡರ್‌ಮ್ಯಾನ್-೨’ ಹಾಗೂ ೨೦೦೭ರಲ್ಲಿ `ಸ್ಪೈಡರ್‌ಮ್ಯಾನ್-೩’ ಅವತರಣಿಕೆಗಳು ಬಿಡುಗಡೆಗೊಂಡವು. ವಿಶೇಷವೆಂದರೆ ಈ ಆವೃತ್ತಿಗಳಿಂದ ಈ ಚಿತ್ರ ಇದುವರೆಗೆ ಸರಿ ಸುಮಾರು ೨.೫ ಬಿಲಿಯನ್ ಡಾಲರ್ ಹಣಗಳಿಸಿ ದಾಖಲೆ ನಿರ್ಮಿಸಿದೆ.

Leave a Reply

Your email address will not be published. Required fields are marked *