ಹಾಯ್ ಬೆಂಗಳೂರ್

ಸಿದ್ದರಾಮಯ್ಯ ಮೊದಲು ಗೋ ಮಾಂಸ ತಿಂದು ತೋರಿಸಲಿ: ಸಚಿವ ಪ್ರಭು ಚೌಹ್ವಾಣ್ ಸವಾಲ್

ನಮ್ಮ ಸರ್ಕಾರ ಗೋ ಮಾಂಸವನ್ನು ನಿಷೇಧ ಮಾಡಿದೆ. ಅದು ನಮ್ಮ ನಿರ್ಧಾರ. ನಮಗೆ ನಮ್ಮ ಗೋವು ಶ್ರೇಷ್ಠ. ಅದನ್ನು ದೇವರು ಅಂತ ಪೂಜೆ ಮಾಡ್ತೀವಿ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ತರಹದವರು ಅದನ್ನು ತಿನ್ನುವುದಕ್ಕೆ ಪ್ರೋತ್ಸಾಹ ಮಾಡುತ್ತಾರೆ ಅಂತ ಸಚಿವ ಪ್ರಭು ಚೌಹ್ವಾಣ್ ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ ಸುಖಾ ಸುಮ್ಮನೆ ಹೋರಾಟ ಮಾಡೋ ಬದಲು ಗೋ ಮಾಂಸವನ್ನು ತಿಂದು ತೋರಿಸಲಿ. ನಂತರ ಮಾತನಾಡಲಿ ಅಂತ ಸಚಿವ ಪ್ರಭು ಚೌಹ್ವಾಣ್ ಸವಾಲ್ ಹಾಕಿದ್ದಾರೆ.

ಗೋಮಾಂಸವನ್ನು ನಿಷೇಧಿಸಬೇಕು ಅಂತ ಕೇಂದ್ರ ಸರ್ಕಾರ ಕಾಯ್ದೆ ಜಾರಿಗೆ ತಂದ ಮೇಲೆ ಅನೇಕರು ಮೋದಿ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಅವರ ಜೊತೆಗೆ ಸಿದ್ದರಾಮಯ್ಯ ಕೂಡ ಸೇರಿಕೊಂಡಿದ್ದಾರೆ.

Leave a Reply

Your email address will not be published. Required fields are marked *