ಹಾಯ್ ಬೆಂಗಳೂರ್

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಸೆನ್ಸೆಕ್ಸ್

ಭಾರತೀಯ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಒಂದು ವಾರದ ಹಿಂದಷ್ಟೇ ಐವತ್ತು ಸಾವಿರ ತಲುಪಿದ್ದ ಬಿಎಸ್ಇ ಸೆನ್ಸೆಕ್ಸ್ ಇವತ್ತು ಬೆಳಗ್ಗೆ ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ 52000 ಗಡಿ ದಾಟಿ ಹೂಡಿಕೆದಾರರ ಮೊಗದಲ್ಲಿ ಹರ್ಷ ಮೂಡಿಸಿದೆ. ಅದೇ ರೀತಿ ನಿಫ್ಟಿ ಕೂಡ 15 ಸಾವಿರದ ಗಡಿ ದಾಟಿ ಬೆಳ್ಳಂಬೆಳಗ್ಗೆ ಮಾರುಕಟ್ಟೆಯಲ್ಲಿ ಸಂಭ್ರಮದ ವಾತಾವರಣ ಉಂಟು ಮಾಡಿದೆ.

ಹೂಡಿಕೆಗಳು ಸರಾಗವಾಗಿ ಬರುತ್ತಿದ್ದರೆ ಮತ್ತು ಕಂಪನಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಾ ಲಾಭ ಮಾಡುತ್ತಿದ್ದರೆ  ಷೇರು ಮಾರುಕಟ್ಟೆಯಲ್ಲಿ ಲವಲವಿಕೆಯ ವಾತಾವರಣ ಮೂಡಿರುತ್ತದೆ. ಭಾರತೀಯ ಷೇರು ಮಾರುಕಟ್ಟೆ ಕೂಡ ಕಳೆದ ಒಂದು ವಾರದಿಂದ ಇದೇ ರೀತಿ ಇತ್ತು. ಅಮೆರಿಕಾದ ಅಧ್ಯಕ್ಷರು ಬದಲಾವಣಾಯಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಅಲ್ಲಿನ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿತು. ಅದರ ಎಫೆಕ್ಟ್ ನಮ್ಮ ದೇಶದ ಮಾರುಕಟ್ಟೆಯ ಮೇಲೂ ಉಂಟಾಯಿತು ಅಂದರೆ ತಪ್ಪಾಗಲಾರದು.

ಒಂದು ಸಮಾಧಾನಕರ ಸಂಗತಿ ಏನೆಂದರೆ ಐಟಿ, ಬ್ಯಾಂಕಿಂಗ್, ಆಟೊಮೊಬೈಲ್ – ಹೀಗೆ ಎಲ್ಲ ಪ್ರಮುಖ ಕ್ಷೇತ್ರಗಳ ಕಂಪನಿಗಳ ಷೇರುಗಳ ಬೆಲೆ ಏರಿಕೆಯಾಗುತ್ತಲೇ ಹೋಗುತ್ತಿವೆ. ಇದರ ಪರಿಣಾಮ ಕಳೆದ ಕೆಲವು ತಿಂಗಳುಗಳಿಂದ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಏರುಮುಖವಾಗಿ ಸಾಗುತ್ತಿದೆ. ಇದರ ಜೊತೆಗೆ ಬ್ಯಾಂಕಿಂಗ್ ಕ್ಷೇತ್ರ ಕೂಡ ತಕ್ಕ ಮಟ್ಟಿಗೆ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದೆ. ಒಟ್ಟಾರೆಯಾಗಿ ಲಾಕ್ ಡೌನ್ ಸಮಯದಲ್ಲಿ ಕುಸಿದು ಹೋಗಿದ್ದ ಆರ್ಥಿಕತೆಯು ಮತ್ತೆ ಭರ್ಜರಿಯಾಗಿ ಚೇತರಿಸಿಕೊಳ್ಳುತ್ತಿದೆ ಎನ್ನುವುದರ ಸಂಕೇತ ಇದಾಗಿದೆ.

Leave a Reply

Your email address will not be published. Required fields are marked *