ಹಾಯ್ ಬೆಂಗಳೂರ್

ಕೈಲಾಸಕ್ಕೆ ಸಮನಾದವನು

ಕೈಲಾಸಕ್ಕೆ ಸಮನಾದವನು

೧೯೧೮ನೆಯ ಇಸವಿಯಲ್ಲಿ ಬೆಂಗಳೂರಿನ ಚಿಕ್ಕ ಲಾಲ್‌ಬಾಗ್ ತುಳಸಿ ತೋಟದಲ್ಲಿ `ಅಮೆಚೂರ್ ನಾಟಕ ಸಂಘ’ದವರಿಂದ ನಾಟಕವೊಂದು ಪ್ರದರ್ಶನಗೊಳ್ಳಲಿತ್ತು. ನಾಟಕ ಮಂದಿರದ ಎಲ್ಲಾ ಆಸನಗಳೂ ಭರ್ತಿಯಾಗಿ ಕುಳಿತುಕೊಳ್ಳಲು ಜಾಗ ಸಿಗದೆ ಪ್ರೇಕ್ಷಕರು ಗದ್ದಲ ಆರಂಭಿಸಿದರು. ಆಗ ಪಕ್ಕದಲ್ಲೇ ಇದ್ದ ಶ್ರೀಮಂತರ ಬಂಗಲೆಗೆ ಬಂದ ವ್ಯಕ್ತಿಯೊಬ್ಬ `ಕಂದಾಡೆ ಶಾಮಣ್ಣನವರು ಕಳುಹಿಸಿದ್ದಾರೆ, ಬೆಂಚು ಕುರ್ಚಿಗಳು ಬೇಕಮ್ಮ’ ಎಂದು ಮನೆಯೊಡತಿಯನ್ನು ವಿನಂತಿಸಿದ. ಆಕೆ `ಅವೆಲ್ಲ ಮಹಡಿಯ ಮೇಲಿವೆ, ಇಳಿಸಿ ಕೊಡಲು ಆಳುಗಳು ಇಲ್ಲವಲ್ಲಪ್ಪ’ ಎಂದಾಗ ಆ ವ್ಯಕ್ತಿ ಬಿಡಿ ತಾಯಿ ಅದಕ್ಯಾಕೆ ಆಳು-ಕಾಳು? ನಾನಿಲ್ಲವೆ ಎಂದವನೇ ಬಾವಿಯಿಂದ ನೀರು ಸೇದುವ ಹಗ್ಗ ತಂದು ಮಹಡಿಯ ಮೇಲಿಂದ ಎರಡು ಬೆಂಚು, ಮೂರು ಕುರ್ಚಿಗಳನ್ನು ಕೆಳಗಿಳಿಸಿ ಹಗ್ಗದಿಂದಲೇ ಕಟ್ಟಿ ಹೆಗಲಿಗೇರಿಸಿಕೊಂಡು ಹೊರಟ. ನಾಟಕ ಮುಗಿದ ನಂತರ ಆಕೆ ಕಂದಾಡೆ ಶಾಮಣ್ಣನವರನ್ನು ಬೆಂಚುಗಳನ್ನು ಒಯ್ಯಲು ಬಂದಿದ್ದ ವ್ಯಕ್ತಿ ಯಾರೆಂದು ಕೇಳಿದರು. ಅದಕ್ಕವರು ನೀಡಿದ ಉತ್ತರ ಹೀಗಿತ್ತು; ಅಯ್ಯೋ ಅವನು ಇಂಗ್ಲಂಡಿಗೆ ಹೋಗಿ ಬಂದಿದ್ದರೂ ಮಾತು, ರೀತಿ-ನೀತಿ ಯಾವುದರಲ್ಲೂ ಬದಲಾವಣೆ ಇಲ್ಲದ ನಿಗರ್ವಿ. ಸರಳತೆಯ ಸಾಕಾರಮೂರ್ತಿ. ಅವನೇ ನಮ್ಮ ಕೈಲಾಸಂ, ಕೈಲಾಸಕ್ಕೆ ಸಮನಾದವನು!

Leave a Reply

Your email address will not be published. Required fields are marked *