ಸಂಸದ ಜಿ.ಎಂ.ಸಿದ್ದೇಶ್ ಪುತ್ರಿಗೆ ಕೊರೋನಾ ಸೋಂಕು

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ ಪುತ್ರಿ ಅಶ್ವಿನಿಯವರಿಗೆ ಕೋವಿಡ್ 19 ಸೋಂಕು ತಗುಲಿದೆ.  ಪತಿ ಡಾ. ಶ್ರೀನಿವಾಸ್ ಹಾಗೂ ಇಬ್ಬರು ಮಕ್ಕಳೊಂದಿಗೆ ಗಯಾನಾದಿಂದ ದೆಹಲಿಗೆ ಮಾರ್ಚ್ 20ರಂದು ಬಂದ ಅಶ್ವಿನಿ ಅಲ್ಲಿ ತಂದೆ ಜಿ.ಎಂ.ಸಿದ್ದೇಶ್‌ರನ್ನು ಭೇಟಿ

                        ಸಂಸದ ಜಿ.ಎಂ.ಸಿದ್ದೇಶ್

ಮಾಡಿದ್ದಾರೆ.  ಬಳಿಕ ಅವರ ಜೊತೆ ಮಾರ್ಚ್ 22ರಂದು ಬೆಂಗಳೂರಿಗೆ ಬಂದ ಅಶ್ವಿನಿ ರಸ್ತೆ ಮಾರ್ಗವಾಗಿ ಚಿತ್ರದುರ್ಗದ ಭೀಮಸಮುದ್ರಕ್ಕೆ ಆಗಮಿಸಿದ್ದಾರೆ. ವಿದೇಶದಿಂದ ಬಂದರು ಎಂಬ ಕಾರಣಕ್ಕೆ ಚಿತ್ರದುರ್ಗದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ ಅವರು ಅಶ್ವಿನಿ ಹಾಗೂ ಅವರ ಪತಿ ಮತ್ತು ಮಕ್ಕಳ ಬ್ಲಡ್ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆಗೆ ಕಳಿಸಿದ್ದಾರೆ. ಮಾರ್ಚ್ 24ರಂದು ಅದರ ವರದಿ ಬಂದಿದ್ದು ಅಶ್ವಿನಿಯವರಿಗೆ ಮಾತ್ರ ಕೋವಿಡ್ 19 ಪಾಸಿಟಿವ್ ಇರುವುದು ಪತ್ತೆಯಾಗಿದೆ. ಬೆಂಗಳೂರು ಮತ್ತು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇವರನ್ನು ಪರೀಕ್ಷೆ ಮಾಡಲಿಲ್ಲವಾ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.

ಕೊರೋನಾ ಪತ್ತೆಯಾಗುವುದಕ್ಕೆ ಮುಂಚೆ ಭೀಮಸಮುದ್ರ ಹೇಗಿತ್ತೋ ಈಗಲೂ ಹಾಗೇ ಇದೆ. ಸರಿಯಾಗಿ ಬಂದೋಬಸ್ತ್ ಮಾಡಿಲ್ಲ. ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಭೀಮಸಮುದ್ರದಲ್ಲಿ ಅತೀ ದೊಡ್ಡ ಅಡಿಕೆ ಮಾರುಕಟ್ಟೆ ಹೊಂದಿದೆ. ಇಲ್ಲಿಂದಲೇ ಅನೇಕ ಕಡೆಗೆ ಅಡಿಕೆ ಸಪ್ಲೈ ಆಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ವರ್ತಕರು ಇಲ್ಲಿಗೆ ಬರುತ್ತಾರೆ.

ಊರಿನ ಜನರು ಇವತ್ತಿಗೂ ಬಸ್ ಸ್ಟ್ಯಾಂಡ್ ಬಳಿ ಗುಂಪು ಗುಂಪಾಗಿ ಸೇರುತ್ತಾರೆ. ಖಾಲಿ ಸೈಟುಗಳಲ್ಲಿ ಇಸ್ಪೀಟ್ ಆಟ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದುರ್ಗದಿಂದ ಭೀಮಸಮುದ್ರಕ್ಕೆ ಜನರು ಬೈಕಿನಲ್ಲಿ ಆರಾಮಾಗಿ ಅಡ್ಡಾಡುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ ಕಷ್ಟ.

       -ವರದಿಗಾರ

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top