ಹಾಯ್ ಬೆಂಗಳೂರ್

ತಮಿಳಿನಲ್ಲಿ ನಟಿಸ್ತಾರಾ ರಾಕಿಂಗ್ ಸ್ಟಾರ್ ಯಶ್?

  • ರಾಕಿಂಗ್ ಸ್ಟಾರ್ ಯಶ್ ಅವರು ಯಶಸ್ಸಿನ ಏಣಿಯನ್ನು ಏರುತ್ತಲೇ ಇದ್ದಾರೆ. ನಿರ್ಮಾಪಕರು, ನಿರ್ದೇಶಕರು ಅವರ ಬೆನ್ನು ಬಿದ್ದಿದ್ದಾರೆ. ಆದರೆ ಅವರು ತುಂಬಾ ಚ್ಯೂಸಿಯಾಗಿದ್ದಾರೆ.
  • ಅಸಲಿಗೆ ಕೆಜಿಎಫ್‌ ಸಿನಿಮಾದ ನಂತರ ನಟ ಯಶ್ ಇಮೇಜ್‌  ಬದಲಾಗಿದೆ. ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಭಾರತೀಯ ನಟ ಎಂಬ ಖ್ಯಾತಿಯೂ ಅವರನ್ನು ಅರಸಿ ಬಂದಿದೆ. ಸದ್ಯ ಯಶ್ ಕೆಜಿಎಫ್‌ ಭಾಗ–2 ಅನ್ನು ಮುಗಿಸಿದ್ದಾರೆ. ಈ ಸಿನಿಮಾ ಇನ್ನೇನು ಬಿಡುಗಡೆಯಾಗಲಿದೆ.
  • ಯಶ್ ಪ್ಯಾನ್‌ ಇಂಡಿಯಾಗೆ ಸ್ಟಾರ್ ಆಗಿದ್ದಾರೆ. ಕಾಲಿವುಡ್‌, ಟಾಲಿವುಡ್‌, ಬಾಲಿವುಡ್‌ನಲ್ಲೂ ಅವರಿಗೆ ಫ್ಯಾನ್ಸ್ ಇದ್ದಾರೆ. ಹಾಗಾಗಿ, ಸಹಜವಾಗಿಯೇ ಅವರ ಮುಂದಿನ ಸಿನಿಮಾಗಳ ಮೇಲೆ ಎಲ್ಲರ ಕಣ್ಣು ಇರುತ್ತದೆ. ಸದ್ಯ ಯಶ್ ಮುಂದೆ ಯಾವ ನಿರ್ದೇಶಕರೊಂದಿಗೆ ಕೈಜೋಡಿಸಲಿದ್ದಾರೆ ಎಂಬ ಬಗ್ಗೆ ಮಾಹಿತಿಯೊಂದು ಹರಿದಾಡುತ್ತಿದೆ.
  • ಆದರೆ ಸದ್ಯದ ಸುದ್ದಿಯ ಪ್ರಕಾರ ಭಾರತೀಯ ಸಿನಿರಂಗದ ದಿಗ್ಗಜ, ಜಂಟಲ್ ಮನ್, ಕಾದಲನ್, ಇಂಡಿಯನ್, ಜೀನ್ಸ್, ಮುದಲ್ವನ್, ಬಾಯ್ಸ್, ಅನ್ನಿಯನ್, ಶಿವಾಜಿ, ಎಂದಿರನ್‌, ನನ್ಬನ್, ಐ ಹಾಗೂ 2.0 ಖ್ಯಾತಿಯ ನಿರ್ದೇಶಕ ಶಂಕರ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
  • ಮೂಲಗಳ ಪ್ರಕಾರ ಇದುವರೆಗೆ ಭಾರತೀಯ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮಟ್ಟದ ಸಿನಿಮಾ ಬಂದಿಲ್ಲ. ಐತಿಹಾಸಿಕ ಸಿನಿಮಾ ಇದಾಗಿದ್ದು, ಸಮರದ ಕಥೆ ಹೊಂದಿದೆ. ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ನಟರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
  • ಈ ಪ್ಯಾನ್‌ ಇಂಡಿಯಾ ಸಿನಿಮಾ 2022ರಲ್ಲಿ ಪ್ರಾರಂಭವಾಗಲಿದ್ದು, 2027ರಲ್ಲಿ ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ಸ್ಕ್ರಿಪ್ಟ್‌ ಕೆಲಸದಲ್ಲಿ ಶಂಕರ್‌ ತಮ್ಮನ್ನು ಈಗಾಗಲೇ ತೊಡಗಿಸಿಕೊಂಡಿದ್ದು, ಜನಪ್ರಿಯ ನಟರ ಜತೆ ಮಾತುಕತೆ ನಡೆದಿದೆ. ಯಶ್‌ ಈ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
  • ಸದ್ಯ ಶಂಕರ್ ಕಮಲಹಾಸನ್‌ ಜೊತೆ ‘ಇಂಡಿಯನ್ 2’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾ ಈ ವರ್ಷದ ಅಂತ್ಯಕ್ಕೆ ಮುಗಿಯಲಿದೆ. ಶಂಕರ್ ಮುಂದಿನ ವರ್ಷ ತಮ್ಮ ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಮಾಡಲು ಯೋಜನೆ ಹಾಕಿಕೊಂಡಿದ್ದು, ಆ ಸಿನಿಮಾ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *