ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

in ಸಿನೆಮಾ ಪುಟ

ಸಂಸದೆ ಸುಮಲತಾ ಅವರ ಸಂಪರ್ಕದಲ್ಲಿ ಇದ್ದ ಕಾರಣ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಂತ ಅವರಿಗೂ ಕೋವಿಡ್ ಪಾಸಿಟಿವ್ ಇದೆ ಅಂತಲ್ಲ. ಯಾವುದಕ್ಕೂ ಮುನ್ನೆಚ್ಚರಿಕೆ ವಹಿಸಬೇಕಲ್ಲ ಹಾಗಾಗಿ ಆಸ್ಪತ್ರೆಗೆ ಅಡ್ಮಿಟ್ ಆಗೋದು ಒಳ್ಳೆಯದು ಅಂತ ಅವರ ಪುತ್ರ ಹೇಳಿದರಂತೆ. ಹಾಗಾಗಿ ರಾಕ್ ಲೈನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರ್ತಮಾನವಿದೆ.

ಅಂಬರೀಶ್ ಸ್ಮಾರಕದ ಕುರಿತು ಚರ್ಚೆ ಮಾಡಲು ಜೂನ್ 29ರಂದು ಸಂಸದೆ ಸುಮಲತಾ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದರು. ಆಗ ಸುಮಲತಾ ಅವರ ಜೊತೆಗೆ ರಾಕ್ ಲೈನ್ ವೆಂಕಟೇಶ್ ಕೂಡ ಇದ್ದರು. ಸುಮಲತಾ ಅವರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದ ನಂತರ ರಾಕ್ ಲೈನ್ ಕ್ವಾರಂಟೈನ್ ಗೆ ಒಳಗಾಗಿದ್ದರು. ಅವರಿಗೆ ಕೋವಿಡ್ ನ ಯಾವುದೇ ಲಕ್ಷಣ ಕಂಡು ಬಂದಿಲ್ಲವಾದರೂ ಟೆಸ್ಟ್ ಮಾಡಿಸೋದು ಉತ್ತಮ ಎಂಬ ಕಾರಣಕ್ಕೆ ಪುತ್ರ ಡಾ. ಅಭಿಲಾಷ್ ಅವರ ಸಲಹೆ ಮೇರೆಗೆ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.

*

Latest from ಸಿನೆಮಾ ಪುಟ

Go to Top