ರವಿಮಾಮನ ಹಾಡು ಹಗಲು!

in ಸಿನೆಮಾ ಪುಟ

ರವಿಮಾಮನ ಹಾಡು ಹಗಲು!

ಕ್ರೇಜಿಸ್ಟಾರ್ ರವಿಚಂದ್ರನ್ ಇನ್ನೂ ಹಾಡುಗಳ ಹಬ್ಬದ ಮೂಡಿನಿಂದ ಹೊರಬಂದ ಹಾಗಿಲ್ಲ. ಇಡೀ ಸಿನೆಮಾವನ್ನು ಎರಡೂಕಾಲು ಗಂಟೆ ಹಾಡುಗಳಿಂದಲೇ ಜೀವಂತವಾಗಿ ಇರಿಸಿದ ಕನ್ನಡದ ಮೊದಲ ತಂತ್ರಜ್ಞ ಎಂದರೆ ಅದು ರವಿಮಾಮ. ಅಸಲಿಗೆ ಇವತ್ತಿಗೂ ‘ಪ್ರೇಮಲೋಕ’ದಿಂದ ‘ಮಲ್ಲ’ ಸಿನೆಮಾವರೆಗೂ ರವಿಚಂದ್ರನ್ ಚಿತ್ರದಲ್ಲಿ ಹಾಡುಗಳೇ ಹೈಲಟು. ಅದೇ ರೀತಿ ರವಿಚಂದ್ರನ್ ‘ರವಿ ಬೋಪಣ್ಣ’ ಎಂಬ ಚಿತ್ರದಲ್ಲಿ ಒಂಬತ್ತು ಹಾಡುಗಳ ಜೊತೆ ಒಂದಷ್ಟು ಸಣ್ಣ ಸಣ್ಣ ತುಣುಕುಗಳನ್ನೂ ರೆಡಿ ಮಾಡಿದ್ದಾರೆ ಎಂಬ ಸುದ್ದಿ ಇದೆ. ಅದೂ ತಾವೇ ಕೂತು, ವಿಶೇಷ ಕಾಳಜಿ ವಹಿಸಿ ಹಾಡುಗಳ ಹಬ್ಬ ಮಾಡಲು ಮುಂದಾಗಿದ್ದಾರೆ. ಒಂದು ಸಿನೆಮಾಗೆ ಹಾಡುಗಳೇ ಆಮಂತ್ರಣ ಪತ್ರಿಕೆ ಇದ್ದಂಗೆ. ಅದು ಹಿಟ್ ಆದರೆ ಜನ ಥಿಯೇಟರ್‌ಗೆ ಬರುತ್ತಾರೆ ಎನ್ನುವುದು ರವಿಯ strategy.  ಇದೇ ‘ರವಿಮಾಮ’ ಎಂಬ ಸಿನೆಮಾದಲ್ಲಿ ನಯಾಪೈಸೆ ವಿಷಯ ಇಲ್ಲದೇ ಹೋದರೂ ‘ಅಲೆಯೋ ಅಲೆ’ ಎಂಬ ಹಾಡು ನೋಡಲು ಜನ ಮುಗಿಬಿದ್ದಿದ್ದರು. ‘ರವಿ ಬೋಪಣ್ಣ’ ಚಿತ್ರ ಹಿಸ್ಟರಿ ರಿಪೀಟ್ ಮಾಡುತ್ತಾ? ಕಾದು ನೋಡಬೇಕು.

Leave a Reply

Your email address will not be published.

*

Latest from ಸಿನೆಮಾ ಪುಟ

Go to Top