ಹಾಯ್ ಬೆಂಗಳೂರ್

ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಪಿ.ಎಫ್.ಐ. ಮುಖಂಡನ ವಿವಾದಾತ್ಮಕ ಹೇಳಿಕೆ

ಇಷ್ಟು ದಿನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಮಮಂದಿರ ದೇಣಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿ ವಿವಾದ ಹುಟ್ಟುಹಾಕಿದ್ದರು. ಈಗ ಪಿ.ಎಫ್.ಐ ಸಂಘಟನೆಯ ಮುಖಂಡ ಅನೀಸ್ ಅಹಮದ್ ಎಂಬಾತ ನಾಲಿಗೆ ಹರಿಬಿಟ್ಟು ಬೆಂಕಿ ಹಚ್ಚೋಕೆ ಯತ್ನಿಸುತ್ತಿದ್ದಾನೆ.

ಅಸಲಿಗೆ ನಮ್ಮ ದೇಶದಲ್ಲಿ ಒಂದಷ್ಟು ಜನ ಇದ್ದಾರೆ. ಅವರಿಗೆ ಈ ದೇಶ, ದೇಶದ ಜನರು ನೆಮ್ಮದಿಯಿಂದ ಶಾಂತಿಯಿಂದ ಇರೋದು ಬೇಕಿಲ್ಲ. ಏನಾದರೊಂದು ವಿವಾದವನ್ನು ಹುಟ್ಟುಹಾಕುತ್ತಲೇ ಇರುತ್ತಾರೆ. ಅಂಥವರ ಸಾಲಿಗೆ ಈ ಅನೀಸ್ ಅಹಮದ್ ಅಂಥವರು ಸೇರುತ್ತಾರೆ. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಯಾಕೆ ಕೊಡಬೇಕು. ಆರ್.ಎಸ್.ಎಸ್. ಕ್ಯಾನ್ಸರ್ ಇದ್ದ ಹಾಗೆ ಅಂತ ಪಿ.ಎಫ್.ಐ. ಮುಖಂಡ ಹೇಳಿದ್ದಾರೆ.

ಆದರೆ ಆರ್.ಎಸ್.ಎಸ್. ಇದನ್ನು ತೀವ್ರವಾಗಿ ಖಂಡಿಸಿದೆ. ನಾವು ಯಾರನ್ನೂ ಬಲವಂತ ಮಾಡುತ್ತಿಲ್ಲ ಅಂತ ಸ್ಪಷ್ಟನೆ ನೀಡಿದೆ.

Leave a Reply

Your email address will not be published. Required fields are marked *