ಹಾಯ್ ಬೆಂಗಳೂರ್

ರಾಮ ಮಂದಿರ ಕಟ್ಟೋಕೆ ಕಾಸು ಕೊಡಿ ಅಂತ ಯಾರನ್ನೂ ಬಲವಂತ ಮಾಡ್ತಿಲ್ಲ

ರಾಮ ಮಂದಿರಕ್ಕೆ ದೇಣಿಗೆ ಕೊಡದವರ ಹೆಸರನ್ನು ಒಂದು ಕಡೆ ಮಾರ್ಕ್ ಮಾಡಲಾಗುತ್ತಿದೆ. ಹಿಟ್ಲರ್ ನ ಕಾಲದಲ್ಲಿ ನಾಜಿಗಳಿಂದ ಹೀಗಾಗುತ್ತಿತ್ತು. ಇದು ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿಯವರು ಮಾಡುತ್ತಿರೋ ಹೊಸ ಆರೋಪ.

ಕುಮಾರಸ್ವಾಮಿ ಮಾತನ್ನು ಕೇಳಿದರೆ ನಗಬೇಕೋ ಅಳಬೇಕೋ ಗೊತ್ತಾಗ್ತಾ ಇಲ್ಲ ಅಂತಿದಾರೆ ರಾಮನ ಭಕ್ತರು. ಅಲ್ಲಾ ರೀ ಯಾರಾದರೂ ದುಡ್ಡಿಗಾಗಿ ಜನರನ್ನು ಬಲವಂತ ಮಾಡ್ತಾರಾ. ನಮ್ಮ ದೇಶದಲ್ಲಿರುವ ಆಗರ್ಭ ಶ್ರೀಮಂತರು ಮನಸ್ಸು ಮಾಡಿದರೆ ಕೋಟಿ ಕೋಟಿ ತಂದು ರಾಮನ ಪಾದದ ಮೇಲೆ ಸುರಿಯುತ್ತಾರೆ.

ಕುಮಾರಸ್ವಾಮಿಯ ಮಾತನ್ನು ಉಡುಪಿಯ ಪೇಜಾವರ ಶ್ರೀಗಳು ಸಾದಾ ಸೀದಾ ತಿರಸ್ಕಾರ ಮಾಡಿದ್ದಾರೆ. ಯಾರ್ಯಾರು ದೇಣಿಗೆ ಕೊಟ್ಟಿದ್ದಾರೆ ಅವರಿಗೆ ರಸೀದಿಯನ್ನು ಕೊಡುತ್ತಾ ಇದ್ದೀವಿ ಅಂತ ಅವರು ಹೇಳಿದ್ದಾರೆ.

ಇನ್ನು ಈ ಸಂಬಂಧ ಮಾತನಾಡಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಯಾರ್ಯಾರು ದೇಣಿಗೆ ನೀಡಿದ್ದಾರೋ ಅವರ ಮನೆಗೆ ಮಾತ್ರ ಸ್ಟಿಕ್ಕರ್ ಅಂಟಿಸಿದ್ದೇವೆ. ದುಡ್ಡಿಗಾಗಿ ನಾವು ಯಾರನ್ನೂ ಬಲವಂತ ಮಾಡಿಲ್ಲ. ಅವರಾಗಿ ಕೊಟ್ಟರೆ ಮಾತ್ರ ಪಡೆಯುತ್ತೇವೆಯೇ ಹೊರತು ನಾವೇನು ದಬ್ಬಾಳಿಕೆ ಮಾಡಿ ಪಡೆದುಕೊಳ್ಳುತ್ತಿಲ್ಲ ಅಂದಿದ್ದಾರೆ.

ಎಲ್ಲರ ಮನೆಯ ಬಾಗಿಲಿಗೂ ನಮ್ಮ ಕಾರ್ಯಕರ್ತರು ಹೋಗಿದ್ದಾರೆ. ಜನರು ಅವರಾಗೇ ಸಂತೋಷ ಕೊಟ್ಟರೆ ಮಾತ್ರ ನಾವು ಪಡೆಯುತ್ತಿದ್ದೇವೆ.

Leave a Reply

Your email address will not be published. Required fields are marked *