ವಿಶೇಷ ಚೇತನ ಮಕ್ಕಳ ಕ್ರಿಕೆಟ್ ಗೆ ನಟಿ ರಾಗಿಣಿ ಬೆಂಬಲ
ಅಂಗವೈಕಲ್ಯ ಹೊಂದಿದ ಮಕ್ಕಳಿಗೆ ಅಂತಲೇ ಕರ್ನಾಟಕ ಫಿಸಿಕಲಿ ಛಾಲೆಂಜ್ಡ್ ಕ್ರಿಕೆಟ್ ಅಸೋಸಿಯೇಷನ್ ನವರು ಆಯೋಜನೆ ಮಾಡುತ್ತಿರುವ ಟಿ 10 ಕ್ರಿಕೆಟ್ ಟೂರ್ನಮೆಂಟ್ ಗೆ ನಟಿ ರಾಗಿಣಿ ದ್ವಿವೇದಿ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಅಂದಹಾಗೆ ಈ ಟೂರ್ನಮೆಂಟನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಆಡಿಸಲಾಗುತ್ತಿದ್ದು ಇಪ್ಪತ್ತೆಂಟು ರಾಜ್ಯಗಳಿಂದ ತಂಡಗಳು ಆಗಮಿಸುತ್ತಿವೆ. ಇಂತಹ ಮಕ್ಕಳು ಕ್ರಿಕೆಟ್ ಆಡಿದಾಗ ನಾವು ಹೆಮ್ಮೆ ಪಡಬೇಕು ಮತ್ತು ಅವರಲ್ಲಿ ಇನ್ನಷ್ಟು ಆತ್ಮವಿಶ್ವಾಸ ತುಂಬಬೇಕು. ನಾನಂತೂ ಆರುನೂರು ಮಂದಿ ಆಡುವುದನ್ನು ನೋಡಲಿಕ್ಕೆ ಕಾತುರದಿಂದ ಕಾಯುತ್ತಿದ್ದೇನೆ ಅಂತ ರಾಗಿಣಿ ಹೇಳಿದರು.
ಮಾಮೂಲಿ ಕ್ರಿಕೆಟ್ ಗೆ ಸಿಕ್ಕಿದ ಮಾನ್ಯತೆಯೇ ಇದಕ್ಕೂ ಸಿಗುತ್ತದೆ ಎಂಬ ವಿಶ್ವಾಸ ನನಗೆ ಇದೆ. ಯಾಕೆಂದರೆ ಇವರು ತುಂಬ ವೃತ್ತಿಪರರಂತೆ ಆಡುತ್ತಾರೆ. ನನ್ನ ಕೈಲಾದ ಸಹಾಯವನ್ನು ನಾನು ಇವರಿಗೆ ಮಾಡಿದ್ದೇನೆ ಅಂತ ರಾಗಿಣಿ ಬೆಂಬಲ ಸೂಚಿಸಿದರು.