ಪರಪ್ಪನ ಪಂಜರದಲ್ಲಿ ರಾ’ಗಿಣಿ’

in ಲೀಡ್ ನ್ಯೂಸ್/ಸಿನೆಮಾ ಪುಟ
  • ತುಪ್ಪದ ಹುಡುಗಿ ರಾಗಿಣಿಗೆ ಜೈಲು ಫಿಕ್ಸ್ ಆಗಿದೆ. ಇಷ್ಟು ದಿನಗಳ ಕಾಲ ಸಿಸಿಬಿ ವಶದಲ್ಲಿದ್ದ ಈ ನಟಿಮಣಿ ಇನ್ಮುಂದೆ ಜೈಲಿನಲ್ಲಿ ಮುದ್ದೆ ಮುರಿಯಲಿದ್ದಾರೆ.
  • ಹದಿನಾಲ್ಕು ದಿನಗಳ ಕಾಲ ನಟಿ ರಾಗಿಣಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಒಂದನೇ ಎಸಿಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಇದೇ ತಿಂಗಳ 28ನೇ ತಾರೀಖಿನ ತನಕ ಈಕೆ ಪರಪ್ಪನ ಅಗ್ರಹಾರದ ಪಾಲಾಗಲಿದ್ದಾರೆ.
  • ಇವರ ಜಾಮೀನು ಅರ್ಜಿಯ ವಿಚಾರಣೆಯನ್ನು ಇನ್ನೂ ಮೂರು ದಿನಗಳ ಕಾಲ ಕೋರ್ಟ್ ಮುಂದೂಡಿದೆ.ಇನ್ನು ಈ ಕೇಸ್ ನಲ್ಲಿ ಇಲ್ಲಿ ತನಕ ಪೊಲೀಸ್ ಕಸ್ಟಡಿಯಲ್ಲಿದ್ದ ಪ್ರಶಾಂತ್ ರಂಕಾ, ಪೆಪ್ಪರ್, ರಾಹುಲ್, ವಿರೇನ್ ಖನ್ನಾ ಕೂಡ ಜೈಲು ಸೇರಲಿದ್ದಾರೆ.
  • ಇನ್ನು ಸಂಜನಾರನ್ನು ಇನ್ನೂ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ನ್ಯಾಯಾಲಯ ಏನು ಹೇಳುತ್ತದೋ ಕಾದು ನೋಡಬೇಕಿದೆ.
  • ಮತ್ತೆ ಎರಡು ದಿನಗಳ ಕಾಲ ಸಂಜನಾ ಸಿಸಿಬಿ ವಶಕ್ಕೆ – ಹಳೇ ಸಿಮ್ ನೀಡದೆ ಆಕೆ ಆಟ ಆಡಿಸ್ತಿದಾರೆ ಎಂದು ಸಿಸಿಬಿ ಪೊಲೀಸರು ಹೇಳಿದ ಹಿನ್ನೆಲೆಯಲ್ಲಿ ಆಕೆಯನ್ನು ಮತ್ತೆ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನ್ಯಾಯಾಲಯ ನೀಡಿದೆ.

Leave a Reply

Your email address will not be published.

*