ಹಾಯ್ ಬೆಂಗಳೂರ್

ರಾಜಸ್ತಾನದಲ್ಲೂ ತಿರುಪತಿ ವೆಂಕಟೇಶ್ವರ

  1. ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಕಾರಣಕ್ಕೆ ದಕ್ಷಿಣ ಭಾರತ ಪ್ರಖ್ಯಾತ ಯಾತ್ರಾ ಸ್ಥಳವಾಗಿರುವುದು ಸುಳ್ಳಲ್ಲವಾದರೂ ಉತ್ತರ ಭಾರತದ ಭಕ್ತರೂ ಕೂಡ ನಿತ್ಯ ಈತನ ಜೋಳಿಗೆಗೆ ಲಕ್ಷಾಂತರ ರುಪಾಯಿ ಸುರಿದು ಹೋಗುವುದು ಸತ್ಯ.

ಧಾರ್ಮಿಕ ನಂಬಿಕೆಗಳೇನೇ ಇರಲಿ, ಇಲ್ಲಿ ಬರುವ ವಂತಿಗೆ ಸಾಲದು ಎಂಬಂತೆ ಈತ ತಾನೇ ಹೋಗಿ ದೂರದ ರಾಜಸ್ತಾನದಲ್ಲಿ ನೆಲೆಸಿದನಾ? ಅಥವಾ ಭಕ್ತರೇ ಅಲ್ಲೊಂದು ನೆಲೆ ಹುಡುಕಿಕೊಟ್ಟರಾ? ಎಂಬುದೇ ಸೋಜಿಗ. ಮಾರ್ವಾಡಿಗಳೇ ಅಧಿಕ ಸಂಖ್ಯೆಯಲ್ಲಿರುವ ಶೇಖವಟಿ ಪ್ರಾಂತ್ಯದ ಬಳಿ ಇರುವ ಸುಜಾನ್‌ಗಡ್ ಎಂಬಲ್ಲಿ ದಶಕಗಳ ಹಿಂದೆಯೇ ತಿರುಪತಿ ದೇವಸ್ಥಾನದ ಪ್ರತಿರೂಪದಂತೇ ಇರುವ ವೆಂಕಟೇಶ್ವರನ ದೇಗುಲವಿತ್ತು. ಇದನ್ನು  ವನಾಶ್ರೀ ವೆಂಕಟೇಶ್ ದೇವಸ್ಥಾನ ಎಂದು ಹೆಸರಿಸಲಾಗಿದೆ. ಹೇಳಿಕೇಳಿ ಶ್ರೀಮಂತರು ಎಂದೇ ಭಾವಿಸಬಹುದಾದರೂ ಮಾರ್ವಾಡಿಗಳಿಗಿಂತ ಇದೇ ನಿಜವಾದ ತಿರುಪತಿ ಎಂದು ನಂಬಿ ಬರುವ ವಿದೇಶಿಯರೇ ಹೆಚ್ಚು ದೇಣಿಗೆ ನೀಡುತ್ತಾರೆ ಎಂಬುದು ಕೂಡ ಸತ್ಯ!

Leave a Reply

Your email address will not be published. Required fields are marked *