ಇದೇನಿದು ಅಣ್ತಮ್ಮ?

in ಸಿನೆಮಾ ಪುಟ

ಇದೇನಿದು ಅಣ್ತಮ್ಮ?

ತಮ್ಮನ ಸಿನೆಮಾ ಮೂರು ವರ್ಷಗಳಾದರೂ ಬಿಡುಗಡೆ ಆಗುವುದಿಲ್ಲ, ಅಣ್ಣನ ಸಿನೆಮಾ ವರ್ಷಕ್ಕೆ ಮೂರು ಬರುತ್ತದೆ, ಬರುತ್ತಲೇ ಇರುತ್ತದೆ!

ಇದು ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಸಿನೆಮಾಗಳ ಬಗ್ಗೆ ಜನರು ಮಾಡುತ್ತಿರುವ ಕಾಮೆಂಟ್. ಹೌದು, ಧ್ರುವ ಸರ್ಜಾನ ‘ಭರ್ಜರಿ’ ಸಿನೆಮಾ ಬಂದಿದ್ದೇ ಮರೆತು ಹೋಗುವ ರೇಂಜಿಗೆ ವರ್ಷಗಳು ಕಳೆದು ಹೋಗಿವೆ. ‘ಪೊಗರು’ ಸಿನೆಮಾ ಬಗ್ಗೆ ಜನ ನಿರೀಕ್ಷೆ ಇಟ್ಟುಕೊಂಡು ಸುಸ್ತಾಗಿ ಹೋಗಿದ್ದಾರೆ. ಅದೇ ಚಿರಂಜೀವಿ ಸರ್ಜಾ ಮಾತ್ರ ‘ಸಿಂಗ’, ‘ಖಾಕಿ’, ‘ಶಿವಾರ್ಜುನ’ ಅಂತ ಒಂದರ ಹಿಂದಂತೆ ಒಂದು ಪಿಕ್ಚರ್ ಬಿಡುತ್ತಲೇ ಇದ್ದಾರೆ ಮತ್ತು ಅವೆಲ್ಲಾ ಥಿಯೇಟರ್ ಬಿಟ್ಟು ಹೋಗುತ್ತಲೇ ಇವೆ. ಬಿಡುಗಡೆಯಾದ ಎರಡನೇ ಶೋಗೇ ಖಾಲಿ ಹೊಡೆಯುತ್ತಿವೆ. ಇತ್ತ ಸಹೋದರ ಧ್ರುವನ ಸಿನೆಮಾ ಇವತ್ತು ಬಿಡುಗಡೆ ಆಗುತ್ತದೆ ನಾಳೆ ಬಿಡುಗಡೆ ಆಗುತ್ತದೆ ಅಂತಷ್ಟೇ ಸುದ್ದಿಯಾಗುತ್ತಿದೆ. ತಮ್ಮನ ವಿಷಯದಲ್ಲಿ ಹೀಗಾದರೆ ಹೇಗೆ, ಅಣ್ಣನ ವಿಷಯದಲ್ಲಿ ಹಾಗಾದರೆ ಹ್ಯಾಗೆ ಎಂಬ ಮಾತೇ ದೊಡ್ಡ ಹಾಟ್ ನ್ಯೂಸ್ ಆಗಿಬಿಟ್ಟಿದೆ. ಹೀಗಿದ್ದೂ ಧ್ರುವ ಮಾತ್ರ ಮದುವೆ ಮಾಡಿಕೊಂಡು ಆರಾಮಾಗಿ ಇದ್ದಾರೆ. ಅತ್ತ ಚಿರಂಜೀವಿ ಸರ್ಜಾ ಸಾಲು ಸಾಲು ಸಿನೆಮಾ ಮಾಡುತ್ತಲೇ ಇದ್ದಾರೆ!

Leave a Reply

Your email address will not be published.

*

Latest from ಸಿನೆಮಾ ಪುಟ

Go to Top