ಪೊಗರು ಚಿತ್ರದ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಗರಂ
ಪೊಗರು ಸಿನೆಮಾ ತಂಡದ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ. ಈಗಾಗಲೇ ಬ್ರಾಹ್ಮಣ ಸಮುದಾಯದವರು ಈ ಕುರಿತು ಧ್ವನಿ ಎತ್ತಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆಯಾಗಿದೆ. ಸಿನೆಮಾ ಒಂದು ಮನರಂಜನಾ ಮಾಧ್ಯಮ. ಅದರಲ್ಲಿ ಕೇವಲ ಮನರಂಜನೆಯಷ್ಟೇ ಇರಬೇಕೇ ಹೊರತು ಇನ್ನೊಬ್ಬರಿಗೆ ನೋವಾಗುವಂತಹ ಯಾವುದೇ ಅಂಶಗಳು ಇರಬಾರದು ಎಂದಿದ್ದಾರೆ.
ಪೊಗರು ಸಿನೆಮಾ ವಿರುದ್ಧ ಬ್ರಾಹ್ಮಣ ಸಮುದಾಯ ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲಿಯೇ ಚಿತ್ರ ಪ್ರದರ್ಶನ ನಿಲುಗಡೆಗೆ ಬಿಜೆಪಿ ಸಂಸದೆ ಶೋಭಾ ಕರಾಂದ್ಲಾಜೆ ಬಲವಾದ ಒತ್ತಾಯ ಮಾಡಿದ್ದಾರೆ.
ಹಿಂದೂ (ಅದರಲ್ಲೂ ಬ್ರಾಹ್ಮಣರ) ಧಾರ್ಮಿಕ ಭಾವನೆಗಳ ಅವಹೇಳನ ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿದೆ. ಹಿಂದೂ ಭಾವನೆಗಳ ಮೇಲೆ ಚೆಲ್ಲಾಟ ಸಲ್ಲದೆ ಎಂದು ಶೋಭಾ ಗುಡುಗಿದ್ದಾರೆ.
ಈಗಾಗಲೇ ನಿರ್ದೇಶಕ ನಂದಕಿಶೋರ್ ಆ ಆಕ್ಷೇಪಾರ್ಹ ದೃಶ್ಯಗಳ ಬಗ್ಗೆ ಕ್ಷಮೆ ಕೇಳಿ ಕತ್ತರಿ ಹಾಕಲು ಒಪ್ಪಿಕೊಂಡಿದ್ದಾರೆ. ಒಪ್ಪಿಕೊಂಡ ಮೇಲೂ ಇನ್ನೇನು ಇವರಿಗೆ? ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.