ಪಾಕಿಸ್ತಾನದ ಷೇರು ಮಾರುಕಟ್ಟೆ ಮೇಲೆ ದಾಳಿ ಮಾಡಿದ್ದು ಯಾರು?

in ಜಿಲ್ಲಾ ಸುದ್ದಿಗಳು

ಕುತಂತ್ರಿ ಪಾಕಿಸ್ತಾನಕ್ಕೆ ತನ್ನನ್ನೇ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಥದ್ದರಲ್ಲಿ ನಮ್ಮ ದೇಶದ ವಿರುದ್ಧ ಉಗ್ರ ಸಂಚು ರೂಪಿಸುತ್ತಾ ಪ್ರತ್ಯೇಕತಾವಾದಿಗಳನ್ನು ಎತ್ತಿ ಕಟ್ಟುತ್ತಿದೆ. ಇವತ್ತು ಕರಾಚಿಯ ಸ್ಟಾಕ್ ಎಕ್ಸ್ ಚೇಂಜ್ ಮೇಲೆ ನಡೆದ ದಾಳಿಯನ್ನೇ ತೆಗೆದುಕೊಳ್ಳಿ. ಮೊದಮೊದಲು ದಾಳಿ ಮಾಡಿದವರು ಯಾರು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ತಾನು ಸಾಕಿ ಬೆಳೆಸಿರುವ ಉಗ್ರವಾದಿಗಳು ದಾಳಿ ಮಾಡಲು ಸಾಧ್ಯವಿಲ್ಲ. ಹಾಗಾದರೆ ಮಾಡಿದ್ದು ಯಾರು ಎಂಬ ಇಮ್ರಾನ್ ಖಾನ್ ಪ್ರಶ್ನೆಗೆ ಥಟ್ಟನೆ ಉತ್ತರ ಕೊಟ್ಟರಲ್ಲ ಬಲೂಚಿ ಪ್ರತ್ಯೇಕತಾವಾದಿಗಳು.

ಹೌದು, ಇವತ್ತು ಪಾಕಿಸ್ತಾನದ ಕರಾಚಿಯ ಸ್ಟಾಕ್ ಎಕ್ಸ್ ಚೇಂಜ್ ಮೇಲೆ ಬಾಂಬು, ಗ್ರೆನೇಡುಗಳನ್ನು ಹಾಕಿ ನಾಲ್ಕು ಜನರ ಸಾವಿಗೆ ಕಾರಣರಾದವರು ಬೇರಾರೂ ಅಲ್ಲ. ಹಲವಾರು ವರ್ಷಗಳಿಂದ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿರುವ ಬಲೂಚಿಗಳು. ಇದೇ ಬಲೂಚಿ ಪ್ರತ್ಯೇಕತಾವಾದಿಗಳು 2018ರಲ್ಲಿ ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲೂ ದಾಳಿ ಮಾಡಿದ್ದರು. ಆಗ ಸುಮಾರು ಎಪ್ಪತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಪಾಕಿಸ್ತಾನದ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿರುವ ಈ ಸ್ಟಾಕ್ ಎಕ್ಸ್ ಚೇಂಜ್ ಮೇಲೆ ದಾಳಿ ನಡೆಸಿದರೆ ಅದು ದೇಶದ ಆರ್ಥಿಕತೆಗೆ ಹೊಡೆತ ಕೊಡುತ್ತದೆ ಎಂಬುದು ದಾಳಿಯ ಹಿಂದಿನ ಉದ್ದೇಶವಾಗಿತ್ತು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ದಾಳಿಗೆ ಯಾವ ರೀತಿ ಉತ್ತರ ಕೊಡುತ್ತಾರೋ ಕಾದು ನೋಡಬೇಕಿದೆ.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top