ಹಾಯ್ ಬೆಂಗಳೂರ್

 ಒಂದೇ ದಿನಕ್ಕೆ ದೇಶದಲ್ಲಿ ಹದಿನಾಲ್ಕು ಸಾವಿರ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಭಾರತದಲ್ಲಿ ಕೋವಿಡ್ 19 ಹೋಗಿದೆ ಅಂದರೆ ಅದು ಶುದ್ಧ ಸುಳ್ಳು. ನಮ್ಮ ನಡುವೆಯೇ ಇನ್ನೂ ಅದು ಹಬ್ಬುತ್ತಲೇ ಇದೆ. ನಿನ್ನೆ ಶುಕ್ರವಾರ ದೇಶಾದ್ಯಂತ ಹದಿನಾಲ್ಕು ಸಾವಿರ ಪಾಸಿಟಿವ್ ಕೇಸ್ ಗಳು ವರದಿಯಾಗಿವೆ. ಅದರಲ್ಲೂ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಇದರ ವೇಗ ಜೋರಾಗಿದೆ.

ಮುಂಬೈನಲ್ಲಿ ಕಳೆದ ಎಪ್ಪತ್ತೆಂಟು ದಿನಗಳಿಗೆ ಹೋಲಿಸಿದರೆ ನಿನ್ನೆ ಸುಮಾರು 823 ಕೇಸ್ ಗಳು ಪತ್ತೆಯಾಗಿವೆ. ಪುಣೆಯಲ್ಲಿ 1000 ಕೇಸ್ ಗಳು ಆತಂಕ ಮೂಡಿಸಿವೆ. ಅಮರಾವತಿ ಹಾಗೂ ನಾಗಪುರದಲ್ಲಿ ಅನುಕ್ರಮವಾಗಿ 755 ಹಾಗೂ 752 ಪ್ರಕರಣಗಳು ಕಾಣಿಸಿಕೊಂಡಿವೆ. ಒಟ್ಟಾರೆಯಾಗಿ ಇಡೀ ಮಹಾರಾಷ್ಟ್ರದಲ್ಲಿ ಮೊನ್ನೆ ಗುರುವಾರ 5427 ಹೊಸ ಪ್ರಕರಣಗಳು ಮತ್ತು ಬುಧವಾರ 4787 ಪ್ರಕರಣಗಳು ಬೆಳಕಿಗೆ ಬಂದಿವೆ.

ಇದಲ್ಲದೆ ಮಧ್ಯಪ್ರದೇಶದಲ್ಲಿ 350 ಪ್ರಕರಣಗಳು, ಪಂಜಾಬ್ ಮತ್ತು ಹರಿಯಾಣಗಳಲ್ಲೂ ನೂರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇನ್ನು ಇದರಿಂದ ಸಾವನ್ನಪ್ಪಿರುವವರ ಸಂಖ್ಯೆಯನ್ನು ನೋಡುವುದಾದರೆ ಮಹಾರಾಷ್ಟ್ರದಲ್ಲಿ ನಲವತ್ತನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಕೇರಳದಲ್ಲಿ 15 ಮಂದಿ, ಪಂಜಾಬ್ ನಲ್ಲಿ 8 ಮಂದಿ ಮತ್ತು ತಮಿಳುನಾಡಿನಲ್ಲಿ 7 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *