ದೆಹಲಿ ನಿಜಾಮುದ್ದಿನ್ : ಮತ್ತೆ ಇನ್ನೂರಾ ಎಪ್ಪತ್ತೈದು ಮಂದಿ ಕ್ವಾರಂಟೈನ್

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್

ದೆಹಲಿ ನಿಜಾಮುದ್ದಿನ್ : ಮತ್ತೆ ಇನ್ನೂರಾ ಎಪ್ಪತ್ತೈದು ಮಂದಿ ಕ್ವಾರಂಟೈನ್

ದೆಹಲಿಯ ತಬ್ಲೀಘಿ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ದೆಹಲಿಯ ವಿವಿಧ ಮಸೀದಿಗಳಲ್ಲಿ ತಲೆಮರೆಸಿಕೊಂಡಿದ್ದ ಸುಮಾರು ಇನ್ನೂರಾ ಎಪ್ಪತ್ತೈದು ವಿದೇಶಿ ಪ್ರಜೆಗಳನ್ನು ದೆಹಲಿಯ ಸ್ಪೆಷಲ್ ಬ್ರ್ಯಾಂಚ್ ಪೊಲೀಸರು ಪತ್ತೆ ಹಚ್ಚಿದ್ದಾರೆ. 172 ಇಂಡೋನೇಷಿಯಾ ಪ್ರಜೆಗಳು, ಕಿರ್ಗಿಸ್ತಾನದ 36 ಮಂದಿ, 21 ಬಾಂಗ್ಲಾದೇಶಿಗಳು, 12 ಮಲೇಷಿಯನ್ನರು, 7 ಮಂದಿ ಅಲ್ಜೀರಿಯನ್ನರು ಹಾಗೂ ಅಮೆರಿಕಾ, ಫ್ರಾನ್ಸ್, ಬೆಲ್ಜಿಯಂ, ಇಟಲಿ ಹಾಗೂ ಟ್ಯುನಿಷಿಯಾದ ತಲಾ ಒಬ್ಬೊಬ್ಬ ಪ್ರಜೆಯನ್ನು ಪೊಲೀಸರು ಕ್ವಾರಂಟೈನ್ ಮಾಡಿದ್ದಾರೆ.

ದೇಶಾದ್ಯಂತ ಚಿಲ್ಲಾ ಮಾಡುತ್ತಾರೆ

ಮಾರ್ಚ್ 31ರಂದು ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದ ವರದಿ ಏನು ಹೇಳುತ್ತದೆ ಅಂದರೆ…. ತಬ್ಲಿಘೀ ಕಾರ್ಯಕರ್ತರು ದೇಶಾದ್ಯಂತ ‘ತಬ್ಲಿಘ್’ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಇದಕ್ಕೆ ಚಿಲ್ಲಾ ಎಂದು ಕರೆಯಲಾಗುತ್ತದೆ. ಕಾರ್ಯಕರ್ತರಲ್ಲಿ ಭಾರತೀಯರು ಮತ್ತು ವಿದೇಶಿ ಪ್ರಜೆಗಳು ಒಳಗೊಂಡಿರುತ್ತಾರೆ. ಮೊದಲು ಇವರೆಲ್ಲರೂ ದೆಹಲಿಯ ಹಜ್ರತ್ ನಿಜಾಮುದ್ದಿನ್ ನಲ್ಲಿರುವ ಅಲಮಿ ಮರ್ಕಜ್ ಬಂಗ್ಲೇವಾಲಿ ಮಸೀದಿಯಲ್ಲಿ ಸೇರುತ್ತಾರೆ. ನಂತರ ಅಲ್ಲಿಂದ ಚಿಲ್ಲಾ ಕಾರ್ಯಕ್ಕಾಗಿ ದೇಶದ ವಿವಿಧ ಭಾಗಗಳಿಗೆ ತೆರಳುತ್ತಾರೆ. ಮಾರ್ಚ್ 21ರಂದು ಸುಮಾರು 824 ಕಾರ್ಯಕರ್ತರು ದೇಶಾದ್ಯಂತ ಚಿಲ್ಲಾ ಮಾಡಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಸರಳವಾಗಿ ಹೇಳಬೇಕೆಂದರೆ ಚಿಲ್ಲಾ ಅಂದರೆ ಏಕಾಂತ ಸ್ಥಳದಲ್ಲಿ ಅಥವಾ ಸ್ಮಶಾನದಲ್ಲಿ ಕುಳಿತು ಮೆಡಿಟೇಷನ್ ಮಾಡುವುದು ಅಂತ ಅರ್ಥ. ಇದನ್ನು ನಲವತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top