ಹಾಯ್ ಬೆಂಗಳೂರ್

ನೇತಾಜಿಯ ಕೊಡುಗೆಯನ್ನು ಮರೆಮಾಚಲು ಪ್ರಯತ್ನ ಪಟ್ಟಿದ್ದು ಯಾರು?

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಈ ದೇಶಕ್ಕೆ ನೀಡಿರುವ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅವರ ಧೈರ್ಯ, ಶೌರ್ಯ ಅಪಾರ. ಈಗಿನ ಯುವಕರಿಗೆ ಅಂತಹ ಕೆಚ್ಚೆದೆ ಬರಬೇಕು. ದೇಶವನ್ನು ಕಾಯುವವರು, ದೇಶದ ಮೇಲೆ ಭಕ್ತಿ ಇರುವ ಪ್ರತಿಯೊಬ್ಬನೂ ಕೂಡ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಆರಾಧಿಸಬೇಕು ಅಂತ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಘಂಟಾಘೋಷವಾಗಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ನ್ಯಾಷನಲ್ ಲೈಬ್ರರಿಯಲ್ಲಿ ಶೌರ್ಯಾಂಜಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸುಭಾಷ್ ಚಂದ್ರ ಬೋಸ್ ಅವರನ್ನು ಕೊಂಡಾಡಿದರು. ಈಗಿನ ಯುವ ಜನತೆ ಅವರಲ್ಲಿದ್ದ ಗುಣಗಳಲ್ಲಿ ಕಿಂಚಿತ್ತಾದರೂ ರೂಪಿಸಿಕೊಳ್ಳಬೇಕು ಅಂತ ಸಲಹೆ ನೀಡಿದರು.

ಕೆಲ ಕಿಡಿಗೇಡಿಗಳು ದೇಶಕ್ಕೆ ಅವರು ನೀಡಿರುವ ಕೊಡುಗೆಯನ್ನು ಶಾಶ್ವತವಾಗಿ ಮರೆಮಾಚಲು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಅದು ಎಂದೆಂದಿಗೂ ಸಾಧ್ಯವಾಗಲಿಲ್ಲ ಅಂತ ಹೇಳುವಾಗ ಅಮಿತ್ ಷಾ ಭಾವೋದ್ವೇಗಕ್ಕೆ ಒಳಗಾಗಿದ್ದರು.

ಸದ್ಯದಲ್ಲೇ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ಪ್ರಚಾರ ಮಾಡಲು ಓಡಾಡುತ್ತಿರುವ ಅಮಿತ್ ಷಾ  ಈ ಬಾರಿ ದೀದಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಫೈಟ್ ಕೊಡಬೇಕು ಅಂತ ಹಪಹಪಿಸುತ್ತಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ – ಇವಿಷ್ಟೂ ಬಿಜೆಪಿ ವಿರೋಧಿ ರಾಜ್ಯಗಳೇ. ಕಮಲ ಪಡೆಗೆ ಇಲ್ಲಿ ಹೆಚ್ಚು ಹಿಡಿತವಿಲ್ಲ. ಅಮಿತ್ ಷಾ ಅದೇನು ಮ್ಯಾಜಿಕ್ ಮಾಡ್ತಾರೋ ಕಾದು ನೋಡಬೇಕು.

Leave a Reply

Your email address will not be published. Required fields are marked *