ಹಾಯ್ ಬೆಂಗಳೂರ್

ಜಗ್ಗೇಶ್ ಗೆ ಹಿಗ್ಗಾಮುಗ್ಗಾ ಜಾಡಿಸಿದ ದರ್ಶನ್ ಅಭಿಮಾನಿಗಳು

ದರ್ಶನ್ ಅಭಿಮಾನಿಗಳು ಇಂದು ಜಗ್ಗೇಶ್ ಗೆ ಸರಿಯಾಗಿ ಬೆವರಿಳಿಸಿದ್ದಾರೆ. ಯಾವುದೋ ಜ್ಞಾನದಲ್ಲಿ ದರ್ಶನ್ ಬಗ್ಗೆಯೋ ಅಥವಾ ದರ್ಶನ್ ಅಭಿಮಾನಿಗಳ ಬಗ್ಗೆಯೋ ಜಗ್ಗೇಶ್ ಏನೋ ಮಾತನಾಡಿದ್ದಿರಬಹುದು. ಅದು ವೈರಲ್ ಆಗೋಗಿದೆ. ಸಿಕ್ಕಿದ್ದೇ ಛಾನ್ಸು ಅಂತ ದರ್ಶನ್ ಫ್ಯಾನ್ಸ್ ಎಲ್ಲ ಸೇರಿಕೊಂಡು ‘ತೋತಾಪುರಿ’ ಚಿತ್ರದ ಶೂಟಿಂಗ್ ನಲ್ಲಿದ್ದ ಜಗ್ಗೇಶ್ ಗೆ ಹೋಗಿ ಅಮರಿಕೊಂಡಿದ್ದಾರೆ.

ದರ್ಶನ್ ಅಭಿಮಾನಿಗಳು ಬಂದ ಫೋರ್ಸ್ ನೋಡಿ ಮೊದಲು ಜಗ್ಗೇಶ್ ಬಾಯಲ್ಲಿ ಸುಳ್ಳು ಬಂದಿದೆ. ಏ ಆ ಆಡಿಯೋಲಿರೋ ವಾಯ್ಸ್ ನಂದಲ್ಲವೇ ಅಲ್ಲ ಅಂತ ಜಗ್ಗೇಶ್ ನೀಟಾಗಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಂದವರೆಲ್ಲ ಬಕ್ರಾಗಳು, ಇವರು ಹೇಳಿದ ಹಂಗೆ ಕೇಳಿಕೊಂಡು ಹೊರಟು ಹೋಗುತ್ತಾರೆ ಅಂತ ಜಗ್ಗೇಶ್ ಭಾವಿಸಿದ್ದರೇನೋ. ಆದರೆ ಬಂದವರ್ಯಾರೂ ಜಗ್ಗೇಶ್ ಸುಳ್ಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವರು ಅದಾಗಲೇ ಆ ಆಡಿಯೋಲಿರೋ ಧ್ವನಿ ಯಾರದ್ದು ಅಂತ ಪರಿಶೀಲನೆ ಮಾಡಿಕೊಂಡೇ ಬಂದಿದ್ದರು.

ಮೊದಮೊದಲು ಜಗ್ಗೇಶ್ ವಾದ ಮಾಡಿದರೂ ಕೂಡ ಯಾವಾಗ ದರ್ಶನ್ ಫ್ಯಾನ್ಸ್ ಗರಂ ಆದರೋ ಆಗ ವಿಧಿ ಇಲ್ಲದೆ ತೆಪ್ಪಗಾಗಬೇಕಾಯಿತು. ಸುಮ್ಮನೆ ಎದ್ದೋಗೋ ಮಾತ್ ಬಿದ್ದೋಗ್ಲಿ ಅಂತ ಆಯ್ತಪ್ಪ ತಪ್ಪಾಯ್ತು ಬಿಡ್ರಪ್ಪ ಅಂತ ತೇಪೆ ಹಾಕಿದರು ಜಗ್ಗೇಶ್.

ಒಟ್ಟಿನಲ್ಲಿ ಇವತ್ತು ಯಾಕೋ ನವರಸನಾಯಕನ ಟೈಂ ಸರಿ ಇದ್ದಂತೆ ಕಾಣುತ್ತಿಲ್ಲ.

Leave a Reply

Your email address will not be published. Required fields are marked *