ಬಾಲಿವುಡ್ ನಟಿ ಕಂಗನಾ ರಾಣಾವತ್ ಗೆ ಮುಂಬೈ ಪೊಲೀಸರು ವಿಚಾರಣೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ, ಖ್ಯಾತ ರಚನೆಕಾರ ಜಾವೇದ್ ಅಖ್ತರ್ ಕುಟುಂಬದ ವಿರುದ್ಧ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಖ್ತರ್ ಕಂಗನಾ ವಿರುದ್ಧ ಅಂಧೇರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಕಂಗನಾ ರಣಾವತ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ಜನವರಿ 22ರಂದು ಜುಹು ಪೊಲೀಸರ ಮುಂದೆ ವಿಚಾರಣಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಝಾನ್ಸಿರಾಣಿ ಲಕ್ಷ್ಮಿಬಾಯಿ ಚಿತ್ರ ಮಾಡಿ ವರ್ಷವೇ ಕಳೆದಿದ್ದರೂ ಈಕೆ ಇನ್ನೂ ಆ ಗುಂಗಿನಿಂದ ಹೊರಬಂದಂತೆ ಕಾಣಿಸುತ್ತಿಲ್ಲ. ಅದಕ್ಕೆ ಸುಮ್ಮನೆ ಬಾಯಿಗೆ ಬಂದಂತೆ ಮಾತಾಡಿಕೊಂಡು ಓಡಾಡುತ್ತಿದ್ದಾಳೆ. ಇದೇ ರೀತಿ ಅರಚಾಡುತ್ತಿದ್ದ ಅರ್ನಬ್ ಗೋಸ್ವಾಮಿಯ ಪರಿಸ್ಥಿತಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಈಕೆಗೂ ಮಾಡಿದರೆ ಆಗ ಸುಮ್ಮನಾಗುತ್ತಾಳೆ ಅಂತ ಬಾಲಿವುಡ್ ಗೆ ಬಾಲಿವುಡ್ಡೇ ಮಾತಾಡಿಕೊಳ್ಳುತ್ತಿದೆ.