ಹಾಯ್ ಬೆಂಗಳೂರ್

ಮೊಡವೆಗಳು ಮನಸ್ಸನ್ನು ಕಾಡುತ್ತವೆಯೋ ಅಥವಾ ಮುಖವನ್ನೋ….?

ಕೇಳಿ

ಮೊಡವೆಗಳು ಮನಸ್ಸನ್ನು ಕಾಡುತ್ತವೆಯೋ ಅಥವಾ ಮುಖವನ್ನೋ….?

 • ಶಾರದಾ ವಿ. ಪೈ, ಕುಮಟಾ
 • ಶಾಸಕರ ಖರೀದಿಗೆ ‘ಕುದುರೆ ವ್ಯಾಪಾರ’ದ ಬದಲು ಇನ್ನೇನಾದರೂ ಹೆಸರು ಸೂಚಿಸಿ?

* ಹೆಸರಲ್ಲ, ಅವರು ರೇಟು ಸೂಚಿಸಿ ಅನ್ನುತ್ತಿದ್ದಾರೆ.

 • ಪೆಮ್ಮನಹಳ್ಳಿ ಚಿಕ್ಕಣ್ಣ, ಟಿ.ಎನ್. ಬೆಟ್ಟ
 • ನನ್ನನ್ನು ಇಲ್ಲೊಬ್ಬಳು ಪ್ರೇಮದ ಬಾಣಲೆಯಲ್ಲಿ ಬೇಯಿಸುತ್ತಿದ್ದಾಳಲ್ಲಾ…?

* ಗ್ಯಾಸೆಲ್ಲಿಂದ ಸಿಕ್ತಂತೆ ಅವಳಿಗೆ. ಕೇಳ್ರೀ?

 • ವಿ. ಚಂದ್ರೇಗೌಡ, ನಾಗದಾಸನಹಳ್ಳಿ
 • ಸಿನೆಮಾದಲ್ಲಿ, ಬೇರ್ಪಟ್ಟ ಪ್ರೇಮಿಗಳು ಮತ್ತೆ ಭೇಟಿಯಾದಾಗ ಓಡಿ ಹತ್ತಿರ ಬಂದು ಸ್ವಲ್ಪ ಹೊತ್ತು ನಿಂತು, ಆಮೇಲೆ ಬಾಚಿ ತಬ್ಬುತ್ತಾರೆ. ಏಕೆ?

* ಬೇರ್ಪಟ್ಟದ್ದು ಅಥವಾ ಭೇಟಿಯಾದದ್ದು ಎರಡರಲ್ಲೊಂದನ್ನು confirm ಮಾಡಿಕೊಳ್ಳಬೇಕಲ್ಲ?

 • ಗೋವಿಂದು ಬಿಳ್ಕೆರೆ, ಬಳ್ಳಾರಿ
 • ನಾವು ‘ಕೇಳುವ’, ನೀವು ‘ಹೇಳುವ’ ನಡುವೆ ಮಾಧ್ಯಮ ಯಾವುದು?

* ರವಷ್ಟು ‘ಕೇಳಿ’ – ಇನ್ನಷ್ಟು ‘ಗೇಲಿ’!

 • ಪ್ರವೀಣ, ಚಳ್ಳಕೆರೆ
 • ಪ್ರೀತಿಸಿ ಕೈ ಕೊಡುವುದರಲ್ಲಿ ಹುಡುಗಿಯರದೇ ಮೇಲುಗೈ.. ಅಲ್ಲವೇ?

* ಪಾಪ, ಹುಡುಗರು ನಂಬಿಸಿ ಕೈಬಿಡುವ ಸ್ಪರ್ಧೆಯಲ್ಲೂ ಗೆಲ್ಲದ ಮೂರ್ಖರು!

 • ಅಮೀರ್ ಹಿಲೀಕೆರೆ, ತೀರ್ಥಹಳ್ಳಿ
 • ಹುಡುಗಿಯರನ್ನು ನೋಡಿದಾಗ ಅಷ್ಟೇನೂ ಸಭ್ಯರಲ್ಲದ ಗಂಡಸರೂ ತಲೆ ತಗ್ಗಿಸುವುದರ ಗುಟ್ಟೇನು?

* ಅಸಭ್ಯವಾದದ್ದು ತಲೆಯೊಂದೇ ಅಲ್ಲ ಎಂದು ಸ್ಪಷ್ಟಪಡಿಸುವ ಪ್ರಯತ್ನ.

 • ಪ್ರಶಾಂತ್ ಸಿ. ಆಚಾರ್ಯ, ಬನ್ನೂರು
 • ಮೊಡವೆಗಳು ಮನಸ್ಸನ್ನು ಕಾಡುತ್ತವೆಯೋ ಅಥವಾ ಮುಖವನ್ನೋ….?

* ಬಹುಶಃ ವಯಸ್ಸನ್ನು!

 • ಕುಮಾರ್ ಕಾವೆಂಪು, ಬೆಂಗಳೂರು
 • ಸದ್ಯದಲ್ಲೇ ಮದುವೆಯಾಗಲಿದ್ದೇನೆ. ಒಂದೇ ಒಂದು ಸಾಲಿನ ಹಿತವಚನ ಹೇಳಿ, ಪ್ಲೀಸ್?

* ಅದು ವಚನಗಳಿಗೆ ಮೀರಿದ ಹಿತ ಕಣಯ್ಯ ಕುಮಾರಾ!

 • ಕಣತೂರು ಕೆಂಪರಾಜ್, ತುರುವೇಕೆರೆ
 • ಹೆಂಗಸನ್ನು ‘ಗೃಹಮಂತ್ರಿ’ ಯೆಂದು ಕರೆಯಲು ಕಾರಣ?

* ‘ಗ್ರಹಚಾರ’ವೆಂದು ಕರೆಯಲಾಗದೆ….!

 • ಪಿ.ಬಿ. ರಾಮಚಂದ್ರ, ತಿಮ್ಮಲಾಪುರ
 • ರೊಟ್ಟಿಗೆ ಹಸಿದವರಿಗಿಂತ, ಪ್ರೀತಿಗೆ ಹಸಿದವರ ಸಂಖ್ಯೆಯೇ ಜಗತ್ತಿನಲ್ಲಿ ಜಾಸ್ತಿ ಅಲ್ವೇ?

* ರೊಟ್ಟಿ ತಿಂದು ತೇಗಿದವರಿದ್ದಾರೆ. ಪ್ರೀತಿಯುಂಡು ಕೈ ತೊಳೆದವರು ಮಾತ್ರ ಸಿಗಲಾರರು!

 

Leave a Reply

Your email address will not be published. Required fields are marked *