ಮಹಾರಾಷ್ಟ್ರದಲ್ಲಿ ಮತ್ತೆ ಕಟ್ಟುನಿಟ್ಟಿನ ಲಾಕ್ ಡೌನ್: ಕರ್ನಾಟಕದಲ್ಲೂ ಜಾರಿಯಾಗುತ್ತಾ ಅದೇ ನಿಯಮ?
ಬಡವರ, ಮಧ್ಯಮ ವರ್ಗದವರ ಬಾಯಿಗೆ ಮಣ್ಣು ಹಾಕುವ ಕಾಲ ಸನ್ನಿಹಿತವಾಗಿದೆ. ಮಹಾರಾಷ್ಟ್ರದ ಅಮರಾವತಿ ನಗರ ಮತ್ತು ಅಚಲ್ ಪುರ ಟೌನನ್ನು ಒಂದು ವಾರದ ಮಟ್ಟಿಗೆ ಅಂದರೆ ಮಾರ್ಚ್ 8ನೇ ತಾರೀಖಿನ ತನಕ ಲಾಕ್ ಡೌನ್ ಮಾಡಲಾಗಿದೆ.
ಅಸಲಿಗೆ ಮೇಲೆ ಹೇಳಿದ ಈ ಊರುಗಳಲ್ಲಿ ಫೆಬ್ರವರಿ 21 ರಿಂದ ಫೆಬ್ರವರಿ 28ರ ತನಕ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಕೋವಿಡ್ ಪಾಸಿಟಿವ್ ಕೇಸ್ ಗಳು ಹೆಚ್ಚಾಗುತ್ತಿರುವ ಕಾರಣ ಮತ್ತೊಂದು ವಾರಕ್ಕೆ ಅದನ್ನು ವಿಸ್ತರಿಸಲಾಗಿದೆ.
ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ ಉಳಿದೆಲ್ಲ ಬಂದ್ ಆಗಿರಬೇಕು. ಕಳೆದ ವರ್ಷ ಯಾವ ರೀತಿ ಲಾಕ್ ಡೌನ್ ಮಾಡಲಾಯಿತೋ ಈಗಲೂ ಅದೇ ರೀತಿ ಲಾಕ್ ಡೌನ್ ಮಾಡಲಾಗುತ್ತಿದೆ. ಕಳೆದ ವರ್ಷದ ಪರಿಸ್ಥಿತಿ ಮರುಕಳಿಸಬಾರದು ಅಂದರೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿದೆ. ಜನಜಂಗುಳಿಯಂತೂ ಸೇರುವಂತೆಯೇ ಇಲ್ಲ. ಹೀಗೆ ಮಾಡಿದರೆ ಮಾತ್ರ ಪರಿಸ್ಥಿತಿ ಕೊಂಚ ಸುಧಾರಿಸುತ್ತದೆ. ಇಲ್ಲದಿದ್ದರೆ ಕಷ್ಟ ಕಷ್ಟ.