ಹಾಯ್ ಬೆಂಗಳೂರ್

ಕೇಳಿ : ಮದುವೆಯಾಗಬೇಕಾದರೆ ಹದಿನೆಂಟು ವರ್ಷ ದಾಟಿರಬೇಕು. ಮಂತ್ರಿಯಾಗಬೇಕಾದರೆ?

ಕೇಳಿ

 • ಎಂ. ಮಹದೇವಸ್ವಾಮಿ, ಹಳೇಗುಡ್ಡದಹಳ್ಳಿ
 • ಒಬ್ಬ ಹುಡುಗಿ ನನ್ನನ್ನು ನೋಡಿ ನಕ್ಕಿದ್ದಾಳೆ. ಅದು ಪ್ರೀತಿಯ ದ್ಯೋತಕವೇ?

* ‘ಹುಚ್ಚು ಮುಂಡೆಗಂಡ’ ಅಂತ ಬೈದರೆ ‘ನನ್ನನ್ನ ಗಂಡ ಅಂದ್ರು’ ಅಂತ ಸಂತೋಷಪಡೋಕಾಗುತ್ಯೆ?

 • ಎಚ್.ಎಸ್. ಸುರೇಶ್ ಕುಮಾರ್, ಹಲಗೂರು
 • ಪೆದ್ದನಂತೆ ನಟಿಸಿ ಒಬ್ಬ ಹುಡುಗಿಯ ಹೃದಯ ಕದಿಯಬೇಕೆಂದಿರುವೆ. ನೀವೇನಂತೀರಿ?

* ನೀನು ನಟಿಸುವ ಅವಶ್ಯಕತೆಯಿಲ್ಲ ಅನ್ಸುತ್ತೆ!

 • ಎಂ.ಪೀರಜಾದೆ, ಗೋಕಾಕ
 • ಮೀಸೆ ಬಂದೋನಿಗೆ ದೇಶ ಕಾಣಲ್ಲ ಅಂತಾರಲ್ಲ. ನಿಜವಾ?

* ನೀನು ನೆಲ ಕಾಣದಿರೋ ಬಗ್ಗೆ ಪ್ರಶ್ನೆ ಕೇಳಲು ಹೋಗಿ ಹೀಗೆ ತಡವರಿಸಬಾರದು ಮರೀ….!

 • ಜಿ. ಪೂರ್ಣಿಮಾ, ದಾವಣಗೆರೆ
 • ಯಾರನ್ನು ಬೇಕಾದರೂ ಮೇಲಕ್ಕೇರಿಸುವ ಅಥವಾ ಕೆಳಕ್ಕಿಳಿಸುವ ತಾಕತ್ತು ಪೆನ್ನಿಗಿದೆಯಂತೆ. ಹೌದೆ?

* ಪೆನ್ನು ಮಾರುವವರ ಅಪಪ್ರಚಾರ!

 • ಅವಿರಾಜ್, ಕುಮಾರಸ್ವಾಮಿ ಲೇ ಔಟ್
 • ತಾಯಿ ದೇವರು ಅಂತಾರೆ. ಹಾಗಾದರೆ ತಂದೆ?

* ಪೀರಲು ದೇವರು!

 • ಅಡ್ಡಂಗಡಿ ಕೊಟ್ರಪ್ಪ, ಬೆಂಗಳೂರು
 • ಪ್ರೀತಿಸಿದ್ದಕ್ಕೆ ಏನು ಸಾಕ್ಷಿ?

* ಬೇಸರ, ಏಕಾಂತ, ಗಡ್ಡ ಮತ್ತು ಹಳೆ ಸಿನೆಮಾ ಹಾಡುಗಳು!

 • ಪಿ.ಬಿ.ಸಿಕಂದರ್, ಪಟ್ಟನಾಯಕನಹಳ್ಳಿ
 • ಖಾರ ತಿನ್ನುತ್ತಾರಲ್ಲ, ಆ ಜಾಗದಲ್ಲಿ ಸಿಹಿ ತಿಂದರೆ ಚೆನ್ನಾಗಿರುತ್ತದಲ್ಲ?

* ಅದಕ್ಕೆ ಬೇರೆ ಜಾಗ ಇರುತ್ತಾ? ನಂಗೊತ್ತಿರ್‍ಲಿಲ್ಲ!

 • ರೇವಣಸಿದ್ದು ಕೋರಿ, ತಾಳಿಕೋಟೆ
 • ಇಂದಿನ ಕನ್ನಡ ನಟಿಯರು ಅಂಗಾಂಗ ಪ್ರದರ್ಶಿಸಲು ಕಾರಣ?

* ಹಿಂದಿನ ನಟಿಯರು ಸಂಕೋಚ ಪಟ್ಟಿದ್ದಕ್ಕೆ ಪ್ರತಿಭಟನಾರ್ಥ!

 • ಗಂ.ದಯಾನಂದ, ಕುದೂರು
 • ಪ್ರೇಮ ಯಾವಾಗಲೂ ಸ್ನೇಹದ ಹೊದಿಕೆಯನ್ನು ಹೊದ್ದು ಬರುತ್ತದಂತೆ ನಿಜವೇ?

* ಹೋಗುವಾಗ ಉಟ್ಟ ಬಟ್ಟೆಯನ್ನೂ ಬಿಟ್ಟು ಹೋಗುವುದಿಲ್ಲ. ಅದೇ ಕಷ್ಟ!

 • ಭೀಮಯ್ಯ ರನ್ನ, ರಾಯಚೂರು
 • ಮದುವೆಯಾಗಬೇಕಾದರೆ ಹದಿನೆಂಟು ವರ್ಷ ದಾಟಿರಬೇಕು. ಮಂತ್ರಿಯಾಗಬೇಕಾದರೆ?

* ಹದಿನೆಂಟು ವರ್ಷದವರನ್ನು ದಾಟಿರಬೇಕು!

Leave a Reply

Your email address will not be published. Required fields are marked *