ಹಾಯ್ ಬೆಂಗಳೂರ್

ಸದ್ಯಕ್ಕೆ ಇಲ್ಲ ಮದಕರಿ ನಾಯಕ ಶೂಟಿಂಗ್; ರಾಬರ್ಟ್ ನಂತರ ಮತ್ತೊಂದು ಕಮರ್ಷಿಯಲ್ ಸಿನೆಮಾ

ರಾಜ ವೀರ ಮದಕರಿ ನಾಯಕ ಚಿತ್ರದ ಬಗ್ಗೆ ನಿರೀಕ್ಷೆ ಏನಾದರು ಇಟ್ಟುಕೊಂಡಿದ್ದರೆ ದರ್ಶನ್ ಅಭಿಮಾನಿಗಳು ಇನ್ನೊಂದೆರಡು ವರ್ಷ ಕಾಯಲೇಬೇಕು. 2019ರಲ್ಲಿ ಮುಹೂರ್ತವಾದ ಮೇಲೆ ಕೊರೋನಾದ ಕಾರಣ ಅದರ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಂಡಿತ್ತು. ಅದಾದ ಮೇಲೆ ರಾಬರ್ಟ್ ಮುಗಿಸಿಕೊಡಬೇಕಿತ್ತು. ಹಾಗಾಗಿ ದರ್ಶನ್ ಅದರ ಕಡೆ ಗಮನಹರಿಸಿದರು. ಇನ್ನೇನು ರಾಬರ್ಟ್ ಗೆ ದಿನಗಣನೆ ಆರಂಭವಾಗಿದೆ.

ಈ ಮಧ್ಯೆ ರಾಜ ವೀರ ಮದಕರಿ ನಾಯಕ ಚಿತ್ರವನ್ನು ಈಗಲೇ ಮುಂದುವರೆಸಬೇಕಾ ಅಥವಾ ಕೊಂಚ ಪೋಸ್ಟ್ ಪೋನ್ ಮಾಡಬೇಕಾ ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕೆಂದರೆ ಅದು ದೊಡ್ಡ ಪ್ರಾಜೆಕ್ಟು. ಅದಕ್ಕೆ ಸಾಕಷ್ಟು ಹುಡುಗರು ಬೇಕಾಗುತ್ತದೆ. ಕೊರೋನಾ ಕಾರಣ ಅವರೆಲ್ಲ ಶೂಟಿಂಗ್ ಇಲ್ಲದೆ, ಕೈಯಲ್ಲಿ ಕಾಸಿಲ್ಲದೆ ಪರದಾಡುತ್ತಿದ್ದಾರೆ. ಹಾಗಾಗಿ ಅವರಿಗೋಸ್ಕರ ಒಂದು ಕಮರ್ಷಿಯಲ್ ಪ್ರಾಜೆಕ್ಟ್ ಮುಗಿಸಿಕೊಡ್ತೀನಿ. ಆ ಚಿತ್ರ ದಸರಾ ಅಥವಾ ದೀಪಾವಳಿಗೆ ರಿಲೀಸ್ ಮಾಡಿ ನಂತರ ವೀರ ಮದಕರಿ ನಾಯಕ ಪ್ರಾಜೆಕ್ಟ್ ಕೈಗೆತ್ತಿಕೊಳ್ಳೋಣ ಅಂತಾಗಿದೆ ಎಂದು ದರ್ಶನ್ ಹೇಳಿದ್ದಾರೆ.

ವೀರ ಮದಕರಿ ನಾಯಕ ಚಿತ್ರದ ಶೂಟಿಂಗ್ ಸಲುವಾಗಿ ನಾವೀಗಾಗಲೇ ಲೊಕೇಷನ್ ಹಂಟಿಂಗ್ ಶುರು ಮಾಡಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮಿರ್ಜನ್ ಕೋಟೆ ಸೂಕ್ತ ಅಂತ ಚಿತ್ರ ತಂಡಕ್ಕೆ ಅನಿಸಿದೆ. ನೋಡೋಣ ಆದಷ್ಟು ಬೇಗ ಈ ಕೆಲಸಗಳನ್ನೆಲ್ಲಾ ಮುಗಿಸಿ ಆನಂತರ ರಾಜ ಮದಕರಿ ನಾಯಕ ಚಿತ್ರವನ್ನು ಕೈಗೆತ್ತಿಕೊಳ್ಳಬೇಕು ಅಂತ ಸ್ಮೈಲ್ ಮಾಡುತ್ತಾರೆ ದರ್ಶನ್.

Leave a Reply

Your email address will not be published. Required fields are marked *