ರಾಜಕೀಯ ತಂತ್ರ ಚರ್ಚಿಸಲು ಕೊಲಂಬೋಗೆ ಹೋಗಿದ್ರಂತೆ ಕುಮಾರಣ್ಣ

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್

ಕೊಲಂಬೋ ಪ್ರವಾಸಕ್ಕೆ ತನ್ನನ್ನು ಲಿಂಕ್ ಮಾಡಿದ ಜಮೀರ್ ಅಹಮದ್ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಅವರು ಈ ಕುರಿತು ಆರು ಟ್ವೀಟ್ ಗಳನ್ನು ಮಾಡಿದ್ದಾರೆ. ಅವು ಹೀಗಿವೆ.

ಮೊದಲನೆ ಟ್ವೀಟ್

“ಜೆಡಿಎಸ್ ಪಕ್ಷದ ಗೌಪ್ಯಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ಮುಖಂಡರ ಜೊತೆಗೆ ಶ್ರೀಲಂಕಾದ ಕೊಲಂಬೋಗೆ ಹೋಗಿದ್ದೆ. ನಾನು ಜಮೀರ್ ಜೊತೆಗೆ ಹೋಗಿರಲಿಲ್ಲ. ಅವರೇ ನಮ್ಮ ಜೊತೆಗೆ ಬಂದಿದ್ದರು. ಕದ್ದು ಮುಚ್ಚಿ ಕೊಲಂಬೋ ಯಾತ್ರೆ ಮಾಡಿರಲಿಲ್ಲ”

ಎರಡನೇ ಟ್ವೀಟ್

“ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಿದೆ.”

ಮೂರನೇ ಟ್ವೀಟ್

“2014 ರ ಜೂನ್ ತಿಂಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಕೊಲಂಬೋಗೆ ಪ್ರವಾಸ ಹೋಗುವುದಾಗಿ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿ ಹೋಗಿದ್ದಲ್ಲದೇ, ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ.”

ನಾಲ್ಕನೇ ಟ್ವೀಟ್

“ನೆರೆಯ ರಾಜ್ಯ ಗೋವಾ ಇಲ್ಲವೇ ರಾಜ್ಯದ ರೆಸಾರ್ಟ್ನಲ್ಲಿ ಸಭೆ ನಡೆಸುವುದಕ್ಕಿಂತ ಯಾವುದೇ ಅಡಚಣೆ ಇಲ್ಲದೆ ಶಾಸಕರೊಂದಿಗೆ ಮುಕ್ತವಾಗಿ ಚರ್ಚಿಸಲು ಕೊಲಂಬೋ ಪ್ರವಾಸ ದುಬಾರಿಯಲ್ಲ ಎಂಬ ಕಾರಣಕ್ಕೆ ಇಂತಹ ಸಭೆ ನಡೆಸಿದ್ದು ನಿಜ. ವಿಮಾನ ಹತ್ತುವಾಗಲೂ ಮತ್ತು ವಾಪಸು ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೇನೆ.”

ಐದನೇ ಟ್ವೀಟ್

“ಕೊಲಂಬೋ ಪ್ರಯಾಣ ಅದೇ ಮೊದಲು ಮತ್ತು ಕೊನೆ. ಇದರಲ್ಲಿ ಬಚ್ಚಿಡುವುದು ಏನೇನೂ ಇಲ್ಲ. ಅವರು ನಮ್ಮೊಂದಿಗೆ ಬಂದಿದ್ದರೆ ಹೊರತು ನಾವು ಅವರೊಂದಿಗೆ ಹೋಗಿರಲಿಲ್ಲ”

ಆರನೇ ಟ್ವೀಟ್

ಆಚಾರವಿಲ್ಲದ ನಾಲಿಗೆ ನಿನ್ನನೀಚ ಬುದ್ಧಿಯ ಬಿಡು ನಾಲಿಗೆ.ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆಚಾಚಿ ಕೊಂಡಿರುವಂಥ ನಾಲಿಗೆ.ಸತತವು ನುಡಿ ಕಂಡ್ಯ ನಾಲಿಗೆಚಾಡಿ ಹೇಳಲು ಬೇಡ ನಾಲಿಗೆ.ಪುರಂದರ ದಾಸರು

Leave a Reply

Your email address will not be published.

*