ಶ್! `ಕೃಷ್ಣಸುಂದರಿ’ ಬರ್‍ತಾಳೆ

in ಇದು ಪ್ರತಿವಾರದ ಅಚ್ಚರಿ/ಜಿಲ್ಲಾ ಸುದ್ದಿಗಳು/ಬಾಟಮ್ ಐಟಮ್

ಶ್! `ಕೃಷ್ಣಸುಂದರಿ’ ಬರ್‍ತಾಳೆ

ಅದೇ `ಪ್ರತಿ ವಾರದ ಅಚ್ಚರಿ’ಗಳೊಂದಿಗೆ…

`ಸಾರಿ, ಮೈ ಡಿಯರ್ ಓದುಗ’

ನಿಮಗಿದ್ದ ಎಲ್ಲ ಸಂಶಯಗಳಿಗೂ ನಾನೇ ಉತ್ತರಿಸುತ್ತೇನೆ. ಸಂಶಯ ಅಂದೆನಲ್ಲಾ ಅದೇನು ಅಂಥ ನೀವು ಕೇಳಬಹುದು. ಹೌದು! ಈ ಮಹಾಮಾರಿ ಕೊರೋನಾದ ಕಾಟಕ್ಕೆ ಇಡೀ ದೇಶದ ಪತ್ರಿಕಾರಂಗವೇ ಬೋರಲು ಬಿದ್ದು, ಕೆಲವೊಂದು ಪತ್ರಿಕೆಗಳು ತನ್ನ ಪ್ರಕಟಣೆಯನ್ನ ನಿಲ್ಲಿಸಿದ್ದು ನಿಜ. ಈ ಕಾರಣಕ್ಕಾಗಿಯೇ  ಕಳೆದ ಮಾರ್ಚ್ ಇಪ್ಪತ್ತಾರನೇ ತಾರೀಕಿನ ಸಂಚಿಕೆಯೇ `ಹಾಯ್ ಬೆಂಗಳೂರ್!’ನ ಕೊನೆ ಪ್ರಕಟಣೆ ಆಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಮಂದಿ `ಹಾಯ್ ಬೆಂಗಳೂರ್!’ ಮುಚ್ಚಿದೆ ಅಂತ ರಾಜ್ಯಾದ್ಯಂತ ಪುಕಾರೆಬ್ಬಿಸಿಬಿಟ್ಟರು. ಅದನ್ನೇ ನಂಬಿದ ನನ್ನ ಓದುಗ ದೊರೆಗಳು ಆಘಾತಗೊಂಡು ಪತ್ರಿಕಾ ಕಚೇರಿಗೆ ಎಡೆಬಿಡದೆ ಫೋನು ರಿಂಗಣಿಸಿದರು. ಸುಮಾರು ಆರು ಸಾವಿರಕ್ಕೂ ಹೆಚ್ಚಿನ ಪತ್ರಗಳು ಬಂದು ಕಚೇರಿ ತಲುಪಿವೆ. ಎಲ್ಲರದೂ ಒಂದೇ ಮನವಿ. ಬಾಸ್, ಯಾವ ಕಾರಣಕ್ಕೂ `ಕಪ್ಪು ಸುಂದರಿ’ಯ ಓಟವನ್ನ ನಿಲ್ಲಿಸಬೇಡಿ ಅನ್ನೋದು. ಮೊದಲಿನಿಂದಲೂ ನನ್ನ ಓದುಗರ ಪ್ರೀತಿಯೇ ಅಂಥದ್ದು. ಅದಕ್ಕೆ ಸಾಟಿಯಿಲ್ಲ. ಪರಮ ಸಾಹಸಿ ನಾನಾದರೂ ಈ ಜುಜುಬಿ ಕೊರೋನಾಕ್ಕೆ ಹೆದರಿ ಪತ್ರಿಕೆಯನ್ನು ಮುಚ್ಚೋದುಂಟೆ? ನೋ ಚಾನ್ಸ್. ನನ್ನ ಕಟ್ಟಕಡೆಯ ದಿನದವರೆಗೂ `ಹಾಯ್ ಬೆಂಗಳೂರ್!’ ನಿಲ್ಲುವುದಿಲ್ಲ ಅನ್ನುವ ವಾಗ್ಧಾನವನ್ನ ನನ್ನ ಓದುಗರಿಗೆ ನಾನು ಕೊಡುತ್ತೇನೆ. ಈ ಕೊರೋನಾ ಮಹಾಮಾರಿ ಒಂದು ಹಿಡಿತಕ್ಕೆ ಸಿಕ್ಕಿ, ನಮ್ಮ ಸಮಾಜ ಮೊದಲಿನಂತೆ ನಿರ್ಭಿತ ಸ್ಥಿತಿಗೆ ಮರುಳಿದ ಮೇಲೆ `ಹಾಯ್ ಬೆಂಗಳೂರ್!’ ತನ್ನ  ಓಟ ಮುಂದುವರಿಸಲಿದೆ. ನೆನಪಿಡಿ, ಮತ್ತೆ ನಿಮ್ಮ ಕೈ ಸೇರಲಿರುವ `ಕಪ್ಪುಸುಂದರಿ’ಯ ಬೆಳವಣಿಗೆಗೆ ನಿಮ್ಮ ಸಹಕಾರ ಅಗತ್ಯ. ನೀವು ಸಿದ್ಧರಿರಿ. ಆದಷ್ಟು ಬೇಗ `ಕೃಷ್ಣಸುಂದರಿ’ ಬರ್‍ತಾಳೆ. ಅದೇ `ಪ್ರತಿ ವಾರದ ಅಚ್ಚರಿ’ಗಳೊಂದಿಗೆ…

ನಿಮ್ಮವನು, ರವಿ ಬೆಳಗೆರೆ

Leave a Reply

Your email address will not be published.

*

Latest from ಇದು ಪ್ರತಿವಾರದ ಅಚ್ಚರಿ

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top