ಹಾಯ್ ಬೆಂಗಳೂರ್

ಮೊದಲ ಬಾರಿಗೆ ಟೆಸ್ಟ್ ನಲ್ಲಿ ಸ್ಪಿನ್ನರ್ ಗೆ ಬೋಲ್ಡ್ ಆದ ಕೊಹ್ಲಿ

ಇಂದು ವಿರಾಟ್ ಕೊಹ್ಲಿಗೆ ಅತ್ಯಂತ ಶಾಕ್ ಉಂಟಾದ ದಿನ. ಅದಕ್ಕೆ ಕಾರಣ ಏನಪ್ಪ ಅಂದ್ರ ಅವರು ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಒಬ್ಬ ಸ್ಪಿನ್ನರ್ ಗೆ ಬೌಲ್ಡ್ ಆಗಿದೋದು. ಹೌದು, ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕ್ಯಾಪ್ಟನ್ ವಿರಾಟ್ ಡಕ್ ಔಟ್ ಆಗಿದ್ದಾರೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ.

ಒಳ್ಳೆ ಫಾರಂನಲ್ಲಿದ್ದ ಆರಂಭಿಕ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ಅದ್ಯಾಕೋ ಇವತ್ತು ಡಕ್ ಔಟ್ ಆಗಿಬಿಟ್ಟರು. ಮೂರೇ ಮೂರು ಎಸೆತ ಎದುರಿಸಿ ಆಲಿ ಸ್ಟೋನ್ ಎಸೆತಕ್ಕೆ ಎಲ್.ಬಿ.ಡಬ್ಲ್ಯೂ ಆಗಿಬಿಟ್ಟರು. ನಂತರ  ಒನ್ ಡೌನ್ ಬಂದ ಚೇತೇಶ್ವರ ಪೂಜಾರ ಅದ್ಯಾಕೋ ಜಾಸ್ತಿ ಹೊತ್ತು ನಿಲ್ಲಲಿಲ್ಲ. ಐವತ್ತೆಂಟು ಎಸೆತಗಳನ್ನು ಎದುರಿಸಿ ಇಪ್ಪತ್ತೊಂದು ರನ್ ಗೆ ಬೆನ್ ಸ್ಟೋಕ್ಸ್ ಕ್ಯಾಚ್ ಕೊಟ್ಟ ಔಟ್ ಆಗಿಬಿಟ್ಟರು.

ಬಳಿಕ ಬಂದ ಕ್ಯಾಪ್ಟನ್ ಕೊಹ್ಲಿ ಕಮಾಲ್ ಮಾಡುತ್ತಾರೆ ಅಂತ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಆಯಪ್ಪ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿಬಿಟ್ಟರು.  ಮೊಯೀನ್ ಅಲಿಯ ವಿಭಿನ್ನ ಸ್ಪಿನ್ ಕೊಹ್ಲಿಯನ್ನು ಐದೇ ಬಾಲಿಗೆ ಬೋಲ್ಡ್ ಮಾಡಿಬಿಟ್ಟಿತು. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿಗೆ ಮೊದಲ ಬಾರಿಗೆ ಆದ ಮುಖಭಂಗ ಅಂತ ಹೇಳಬಹುದು.

Leave a Reply

Your email address will not be published. Required fields are marked *