ನಟಿ ಓವಿಯಾಳ ಖಡಕ್ ಮಾತು.
ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿರುವ ನಟಿ ಓವಿಯಾ ಈಗ ಅಭಿಮಾನಿಗಳ ಹಾಟ್ ಫೆವೇರಿಟ್ ಆಗಿದ್ದಾಳೆ. ಈ ಬಾರಿ ಆಕೆ ಅಭಿಮಾನಿಗಳ ನಿದ್ದೆಗೇಡಿಸಿರುವುದು ಸಿನಿಮಾ ಮೂಲಕವಲ್ಲ. ಅಭಿಮಾನಿಯೊಬ್ಬನ ಪ್ರಶ್ನೆಗೆ ಖಡಕ್ ಉತ್ತರ ನೀಡುವ ಮೂಲಕ.
ನಟಿ ಓವಿಯಾ ಕನ್ನಡ ಚಿತ್ರರಂಗದಲ್ಲೂ ನಟಿಸಿದ್ದಾರೆ. ನಟ ಯಶ್ ಜೊತೆ ಕಿರಾತಕ ಚಿತ್ರದಲ್ಲಿ ನಟಿಸಿ ಸೈ ಅನ್ನಿಸಿಕೊಂಡ ಓವಿಯಾ, ಇದೇ ಚಿತ್ರದಿಂದ ಕನ್ನಡಿಗರ ಮನಸ್ಸು ಕದ್ದಿದ್ದು ದಿಟ. ಅನಂತರ ಬೇರೆ ಬೇರೆ ಭಾಷೆಗಳಲ್ಲಿ ನಟಿಸುವ ಮೂಲಕ ಈಕೆ ತನ್ನದೇ ಆದ ಹೆಸರು ಗಳಿಸಿಕೊಂಡಿದ್ದಾಳೆ. ಅದರಲ್ಲೂ ತಮಿಳು ಚಿತ್ರರಂಗದಲ್ಲಿ ಒಂದು ರೇಂಜಿಗೆ ತನ್ನ ಇಮೇಜು ಉಳಿಸಿಕೊಂಡಿದ್ದಾಳೆ. ಇಂಥ ನಟಿಗೆ ಅಭಿಮಾನಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ನಟಿ ಓವಿಯಾಳಿಗೆ ” ಮೇಡಂ, ಹೆಣ್ಣು ಮಕ್ಕಳ ಜೀವನವನ್ನು ಮದುವೆಯಾಗಿ ಹಾಳುವ ಮಾಡುವ ಬದಲು, ಹಸ್ತಮೈಥುನ ಮಾಡಿಕೊಳ್ಳುವುದೇ ಉತ್ತಮ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ’ ಅಂತ ಮುಜುಗರಕ್ಕಿಡಾಗುವ ಪ್ರಶ್ನೆಯೊಂದನ್ನು ಕೇಳಿದ್ದಾನೆ. ಈ ಪ್ರಶ್ನೆಯ ಬಗ್ಗೆ ತಲೆಕೊಡಿಸಿಕೊಳ್ಳದೇ ನಟಿ ಓವಿಯಾ ತನ್ನದೇ ಆದ ರೀತಿಯಲ್ಲಿ
ಅಭಿಮಾನಿಗಳಿಗೆ ನಿಬ್ಬೆರಗಾಗಿಸುವಂತೆ “ಹೌದು, ನೀವು ಹೇಳಿದ್ದು ಸರಿಯಾಗಿಯೇ ಇದೆ ಎಂದು ಉತ್ತರಿಸಿದ್ದಾಳೆ. ಪ್ರಶ್ನೆ ಮುಂದುವರಿಸಿದ ಅಭಿಮಾನಿ : ನಿಮ್ಮ ಮದುವೆ ಮತ್ತು ನಿಮ್ಮನ್ನ ಮದುವೆ ಆಗುವ ಗಂಡಿನ ಬಗ್ಗೆ ಏನೆಲ್ಲ ಕನಸು ಕಂಡಿದ್ದೀರಿ ಅಂತ ಮಾತು ಮುಂದುವರೆಸಿದಾಗ ಯಾವ ಮೂಲಾಜು ಇಲ್ಲದೇ ನನಗೆ ” ಗಂಡನ ಅವಶ್ಯಕತೆಯೇ ಇಲ್ಲ’ ಎಂದು ಖಾರವಾಗಿ ಉತ್ತರಿಸಿದ್ದಾಳೆ.