ಹಾಯ್ ಬೆಂಗಳೂರ್

ಕಿಚ್ಚ ಸುದೀಪ ಚಾರಿಟಬಲ್ ಟ್ರಸ್ಟ್  ವತಿಯಿಂದ ಮತ್ತೊಂದು ಹಳ್ಳಿ ದತ್ತು!

ಕಿಚ್ಚ ಸುದೀಪ ಚಾರಿಟಬಲ್ ಟ್ರಸ್ಟ್ ನಾಲ್ಕು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಯೊಂದನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದೆ. ಚಿತ್ರದುರ್ಗ ಜಿಲ್ಲೆಯ ಅವಿಗೆ ಎಂಬ ಹಳ್ಳಿಯನ್ನು ಕಿಚ್ಚ ಟ್ರಸ್ಟ್ ದತ್ತು ತೆಗೆದುಕೊಳ್ಳುತ್ತಲಿದ್ದು ಅದರ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಕೈ ಜೋಡಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಸುದೀಪ್ ಟ್ರಸ್ಟ್ ಚಿತ್ರದುರ್ಗದಲ್ಲಿ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿತ್ತು. ಪರಶುರಾಂಪುರ ಶಾಲೆ, ಓಬವ್ವನಹಳ್ಳಿ ಶಾಲೆ, ಚಳ್ಳಕೆರೆ ಶಾಲೆ ಹಾಗೂ ಚಿತ್ರದುರ್ಗ ಸರ್ಕಾರಿ ಶಾಲೆಗಳು ಈಗ ಅತ್ಯುತ್ತಮ ಶಾಲೆಗಳಾಗಿ ರೂಪುಗೊಂಡಿರುವುದು ವಿಶೇಷ.

ಸರ್ಕಾರಿ ಶಾಲೆಗಳ ಕಡೆಗೆ ಹೆಚ್ಚು ಹೆಚ್ಚು ಜನರನ್ನು ಸೆಳೆಯುವುದು ನಮ್ಮ ಈ ಟ್ರಸ್ಟ್ ನ ಉದ್ದೇಶವಾಗಿದೆ ಅಂತ ಸುದೀಪ್ ಹೇಳುತ್ತಾರೆ. ಕೊರೋನಾ ಲಾಕ್ ಡೌನ್ ವೇಳೆ ಬಡಜನರಿಗೆ ಈ ಟ್ರಸ್ಟ್ ವತಿಯಿಂದ ಸಾಕಷ್ಟು ಸಹಾಯ ಮಾಡಲಾಗಿದೆ.

Leave a Reply

Your email address will not be published. Required fields are marked *