ಹಾಯ್ ಬೆಂಗಳೂರ್

ಕೇರಳದ ಹಿರಿಯ ನಾಯಕ ಇ.ಶ್ರೀಧರನ್ ಬಿಜೆಪಿ ಸೇರಲು ನಿರ್ಧಾರ

ರಾಜ್ಯಕ್ಕೆ ಏನಾದರೂ ಸ್ವಲ್ಪ ಒಳ್ಳೆಯದನ್ನು ಮಾಡುವ ಉದ್ದೇಶ ಹೊಂದಿದ್ದೇನೆ. ಅದಕ್ಕಾಗಿ ನಾನು ಬಿಜೆಪಿ ಪಕ್ಷವನ್ನು ಸೇರಿಕೊಳ್ಳುತ್ತಿದ್ದೇನೆ ಎಂಬುದಾಗಿ ಕೇರಳದ ಹಿರಿಯ ನಾಯಕ ಇ.ಶ್ರೀಧರನ್ (88) ತಮ್ಮ ಮನದಿಂಗಿತವನ್ನು ಹೊರಹಾಕಿದ್ದಾರೆ.

ಈ ವಯಸ್ಸಿನಲ್ಲಿ ಪಕ್ಷಾಂತರ ಮಾಡೋದು ಇವರಿಗೆ ಬೇಕಾ ಅಂತ ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಇ.ಶ್ರೀಧರನ್ ಬಹಳ ಧೃಡವಾಗಿದ್ದಾರೆ. ನಾನು ಬಾಲ್ಯದಿಂದಲೂ ಬಿಜೆಪಿಯ ಸಿದ್ಧಾಂತಗಳ ಪರವೇ ಇದ್ದೇನೆ ಅಂತ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ನನಗೆ ತುಂಬಾನೇ ಪರಿಚಿತರು. ಅನೇಕ ಅಭಿವೃದ್ಧಿ  ಕೆಲಸ ಕಾರ್ಯಗಳ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಇದು ಕೂಡ ನಾನು ಇವತ್ತು ಬಿಜೆಪಿ ಸೇರುವುದಕ್ಕೆ ಒಂದು ಪ್ರಮುಖ ಕಾರಣ ಅಂತ ಇಂಜಿನಿಯರ್ ಇ.ಶ್ರೀಧರನ್ ಖುಷಿ ವ್ಯಕ್ತಪಡಿಸುತ್ತಾರೆ. 88 ವರ್ಷ ವಯಸ್ಸಿನ ಇ.ಶ್ರೀಧರನ್ ದೇಶದ ಅನೇಕ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಭಾಗವಹಿಸಿದ್ದಾರೆ.

ಕೇರಳದಲ್ಲಿರುವ ಎರಡು ಪ್ರಮುಖ ಪಕ್ಷಗಳಾದ ಯು.ಡಿ.ಎಫ್ ಹಾಗೂ ಎಲ್.ಡಿ.ಎಫ್. ಮೂರು ಕಾಸಿಗೆ ಪ್ರಯೋಜನವಿಲ್ಲ. ಆ ಪಕ್ಷಗಳೇನಿದ್ರೂ ಅವರ ಅವರ ಅಭಿವೃದ್ಧಿ ಮಾತ್ರ ನೋಡಿಕೊಳ್ಳುತ್ತಿವೆಯೇ ಹೊರತು ರಾಜ್ಯದ ಅಭಿವೃದ್ಧಿ ಬಗ್ಗೆ ನಯಾಪೈಸೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣವಾಗಿದೆ. ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎನ್ನುತ್ತಾರೆ ಶ್ರೀಧರನ್.

ನೋಡೋಣ ಕೇರಳದ ಜನತೆ ಏನು ಮಾಡುತ್ತಾರೆ ಅಂತ.

Leave a Reply

Your email address will not be published. Required fields are marked *