ಕೇರಳ ಗೋಲ್ಡ್ ಸ್ಮಗ್ಲಿಂಗ್ ದಂಧೆ: ಯಾರೀಕೆ ಸ್ವಪ್ನ ಸುಂದರಿ

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್

ಜುಲೈ 4ರಂದು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದು ಬಾಕ್ಸ್ ಬಂತು. ಅದರ ಮೇಲೆ ಮನಕ್ಕಾಡ್ ನಲ್ಲಿರುವ ರಾಯಭಾರಿ ಕಚೇರಿಯ ವಿಳಾಸ ಇತ್ತು. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆ ಬಾಕ್ಸನ್ನು ಸೀಝ್ ಮಾಡಿದರು. ಅದರಲ್ಲಿ ಇದ್ದದ್ದು ಏನು ಗೊತ್ತೇ? ಭರ್ತಿ ಮೂವತ್ತು ಕೆಜಿ ಚಿನ್ನ. ಅದರ ಬೆಲೆ ಬರೋಬ್ಬರಿ ಹದಿಮೂರು ಕೋಟಿ ರುಪಾಯಿಗಳು.

ಇದರ ಬೆನ್ನಲ್ಲೇ ವಿರೋಧ ಪಕ್ಷಗಳು ಈ ಕುರಿತು ಸಿಬಿಐ ತನಿಖೆಯಾಗಬೇಕು ಅಂತ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಮೇಲೆ ಒತ್ತಡ  ಹೇರಿತು. ಆಗಲೇ ಸ್ವಪ್ನ ಸುರೇಶ್ ಎಂಬಾಕೆಯ ಹೆಸರು ಬೆಳಕಿಗೆ ಬಂದಿದ್ದು. ಇವಳೇ ಈ ಗೋಲ್ಡ್ ಸ್ಮಗ್ಲಿಂಗ್ ನ ಪ್ರಮುಖ ಆರೋಪಿ.

ಯಾರು ಈ ಸ್ವಪ್ನ ಎಂಬ ಸ್ವರ್ಣ ಸುಂದರಿ?

ಔತಣಕೂಟದಲ್ಲಿ ಸಿಎಂ ಹಾಗೂ ದುಬೈ ರಾಯಭಾರಿ ಜೊತೆ ಸ್ವಪ್ನ

ಈಕೆ ನೆಯ್ಯಟ್ಟಿಂಕಾರ ಎಂಬ ಪಟ್ಟಣದವಳು. ಈಕೆಯ ತಾಯಿ ಇನ್ನೂ ಅಲ್ಲೇ ವಾಸಿಸುತ್ತಿದ್ದಾಳೆ. ಸ್ವಪ್ನ ತನ್ನ ಬಾಲ್ಯವನ್ನು ಅಬುಧಾಬಿಯಲ್ಲಿ ತನ್ನ ತಂದೆಯ ಜೊತೆ ಕಳೆದಳು.ನಂತರ ಅಬುಧಾಬಿ ಏರ್ ಪೋರ್ಟ್ ನ ಪ್ಯಾಸೆಂಜರ್ ಸರ್ವೀಸ್ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡಳು. ಮದುವೆ ಮಾಡಿಕೊಂಡಳಾದರೂಸಾಂಸಾರಿಕ ಜೀವನ ಸರಿ ಹೋಗಲಿಲ್ಲ. ಅಬುಧಾಬಿಯಲ್ಲೇ ಡೈವೋರ್ಸ್ ಕೂಡ ಆಯಿತು.

2011ರಲ್ಲಿ ಭಾರತಕ್ಕೆ ಬಂದವಳೆ ತಿರುವನಂತಪುರಂನ ರನ್ ಆಫ್ ದಿ ಮಿಲ್ ಎಂಬ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡತೊಡಗಿದಳು. 2013ನೇ ಇಸವಿಯಲ್ಲಿ ಏರ್ ಇಂಡಿಯಾ ಸ್ಯಾಟ್ಸ್ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿದಳು. ಅಲ್ಲಿ ಫೋರ್ಜರಿ ಕೇಸಿನಲ್ಲಿ ತಗಲಾಕಿಕೊಂಡು ಪೊಲೀಸರಿಂದ ಬೆಂಡೆತ್ತಿಸಿಕೊಂಡಿದ್ದಳು. 2016ರಲ್ಲಿ ಯಾವಾಗ ಈಕೆಯ ಮೇಲಿದ್ದ ಫೋರ್ಜರಿ ಕೇಸಿನ ವಿಚಾರಣೆ ತೀವ್ರವಾಯಿತೋ ಆಗ ಅಬುಧಾಬಿಗೆ ಪರಾರಿಯಾಗಿಬಿಟ್ಟಳು. ಅಲ್ಲಿ ಯುಎಇ ರಾಯಭಾರಿ ಕಚೇರಿಯಲ್ಲಿ ಸೆಕ್ರೇಟರಿ ಕೆಲಸ ಸಿಕ್ಕಿತು. ಅಲ್ಲಿಂದ ಈಕೆಯ ಜೀವನವೇ ಬದಲಾಗಿ ಹೋಯಿತು.

ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆಗೆ ಸ್ವಪ್ನ

ಯಾವಾಗ ಯುಎಇ ರಾಯಭಾರಿ ಕಚೇರಿಯಲ್ಲಿ ಸೆಕ್ರೇಟರಿಯಾಗಿ ಸೇರಿಕೊಂಡಳೋ ಆಗ ಈಕೆಗೆ ದೊಡ್ಡ ದೊಡ್ಡವರ ಸಂಪರ್ಕ ಸಿಗತೊಡಗಿತು. ಕೇರಳದ ಮುಖ್ಯಮಂತ್ರಿ ಕಚೇರಿ ಹಾಗೂ ಐಟಿ ಡಿಪಾರ್ಟ್ ಮೆಂಟ್ ಸಂಪರ್ಕ ಸಿಕ್ಕಿತು. ಈ ಮಧ್ಯೆ ಈಕೆ ಅಲ್ಲಿನ ನಟಿ ಶನ್ಮಾ ಖಾಸಿಂ ಎಂಬಾಕೆಗೆ ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ಸಹಾಯ ಮಾಡತೊಡಗಿದಳು. ಈ ವಿಚಾರ ಅಲ್ಲಿನ ಪೊಲೀಸರಿಗೆ ತಿಳಿದು ಈಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಏರ್ ಇಂಡಿಯಾ ಸ್ಯಾಟ್ಸ್ ಸಂಸ್ಥೆಯಲ್ಲಿ ಫೋರ್ಜರಿ ಮಾಡಿ ಪರಾರಿಯಾದ ವಿಚಾರ ಬೆಳಕಿಗೆ ಬಂದಿತು.

ಕೇರಳದ ಐಟಿ ಡಿಪಾರ್ಟ್ ಮೆಂಟ್ ನ ಮುಖ್ಯ ಕಾರ್ಯದರ್ಶಿ ಶಿವಶಂಕರ್ ಈಕೆಯನ್ನು ಕೇರಳಕ್ಕೆ ಕರೆಸಿಕೊಂಡು ಸ್ಪೇಸ್ ಪಾರ್ಕ್ ಎಂಬ ಐಟಿ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ನೇಮಕ ಮಾಡಿದ. ಅಲ್ಲದೆ ಆಗಾಗ್ಗೆ ಈಕೆಯ ಮನೆಗೂ ಹೋಗಿ ಬರುತ್ತಿದ್ದ. ಇಬ್ಬರೂ ಜೊತೆಯಾಗಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಇದೀಗ ದುಬೈನಿಂದ ಬಂದಿರುವ ಮೂವತ್ತು ಕೇಜಿ ಚಿನ್ನವು ಸ್ಮಗ್ಲಿಂಗ್ ನ ಒಂದು ಭಾಗವಷ್ಟೆ. ಇದಕ್ಕೂ ಮೊದಲು ಹದಿನೈದು ಬಾರಿ ಇದೇ ರೀತಿ ಚಿನ್ನ ಸ್ಮಗಲ್ ಆಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಪಿಣರಾಯಿ ವಿಜಯನ್ ಸರ್ಕಾರ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎನ್ನುತ್ತಿದೆ. ಸದ್ಯ ತಿರುವನಂತಪುರಂನ ಯುಎಇ ರಾಯಭಾರ ಕಚೇರಿಯ ಮಾಜಿ ಪಿ.ಆರ್.ಒ ಸರಿತ್ ಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಕಾಪಾಡು ಸಿಗಂಧೂರು ಚೌಡೇಶ್ವರಿ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದರ್ಶನಕ್ಕೆಂದು ತೆರಳಿದ್ದ ಜನರು ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿದ್ದಾರೆ.
Go to Top