ಹಾಯ್ ಬೆಂಗಳೂರ್

ಕೇಳಿ: ನಾನು ಪ್ರೀತಿಸಿದ ಹುಡುಗಿಯ ಜಡೆ ನನ್ನಷ್ಟೇ ಉದ್ದವಿದೆಯಲ್ಲ?

 • ಕೇಳಿ:

ನಾನು ಪ್ರೀತಿಸಿದ ಹುಡುಗಿಯ ಜಡೆ ನನ್ನಷ್ಟೇ ಉದ್ದವಿದೆಯಲ್ಲ?

 • ಆರ್. ಸಹನಾಮಣಿ, ಯಳಂದೂರು
 • ಮನುಷ್ಯನಿಗೆ ಶಾಶ್ವತವಾದದ್ದು ಯಾವುದು?

* ಮನುಷ್ಯನೆಂಬ ಆಪಾದನೆ!

 • ಅಂಥೋನಿ, ದಾವಣಗೆರೆ
 • ಸಭೆ ಸಮಾರಂಭದ ಉದ್ಘಾಟನೆಯಲ್ಲಿ ದೀಪ ಹಚ್ಚಲು ಹಲವು ಕೈಗಳೇಕೆ?

* ಒಂದು ದಗ್ಧಹಸ್ತ ಸಾಕು ಅಂತೀರಾ?

 • ಡಿ.ಜಿ.ಮಂಜುನಾಥ್, ದೊಡ್ಡಗುಣಿ
 • ನಾನು ಪ್ರೀತಿಸಿದ ಹುಡುಗಿಯ ಜಡೆ ನನ್ನಷ್ಟೇ ಉದ್ದವಿದೆಯಲ್ಲ?

* ಮತ್ತಿನ್ನೇನು ಬೇಕು? ಪ್ರಾರಂಭಿಸಿ-ಜೀವನ ಜೋಕಾಲಿ!

 • ಹೊ.ಕೃ. ಶ್ರೀಧರ್, ಶಿವಮೊಗ್ಗ
 • ಅಂತರ್ಜಾತಿ ವಿವಾಹವಾದರೆ ಅವರಿಗೆ ಹುಟ್ಟುವ ಮಗು ಯಾವ ಜಾತಿಗೆ ಸೇರುತ್ತದೆ?

* ಅದರಿಷ್ಟದ ಮನುಷ್ಯ ಜಾತಿಗೆ!

 • ಜಿ.ಪರಮೇಶ್, ಚಿತ್ರದುರ್ಗ
 • ಸೆಕ್ಸ್ ಬಗ್ಗೆ ಮಾತಾಡೋಕೆ ಅಂಜೋ ಇಂಡಿಯಾದ ಜನಸಂಖ್ಯೆ ವಿಶ್ವದ ಎರಡನೇ ಸ್ಥಾನ ಪಡೆದಿದೆಯಲ್ಲಾ?

* ‘ಮಾತು ಕಡಿಮೆ ಕೆಲಸ ಜಾಸ್ತಿ’ ಎಂಬ ಘೋಷಣೆಯ ಪರಿಣಾಮ.

 • ಬಿ. ಎನ್.ಚಂದ್ರಶೇಖರ್, ಬಾಲೇನಹಳ್ಳಿ
 • ಪ್ರಾಕ್ಟಿಕಲ್ ಮಾರ್ಕ್ಸ್‌ನ ಹುಡುಗೀರಿಗೇ ಜಾಸ್ತಿ ಕೊಡ್ತಾರಲ್ಲ. ಯಾಕ್ಸಾರ್?

* ಅವರೇ ನಿಜವಾದ ಮಾರ್ಕ್ಸ್‌ವಾದಿಗಳು!

 • ನಾಗರಾಜ, ಹೊಳಲ್ಕೆರೆ
 • ಮನುಷ್ಯನ ಜೀವನ ನೀರ ಮೇಲಿನ ಗುಳ್ಳೆ ಎಂದು ತಿಳಿದಿದ್ದರೂ ನಾವೇಕೆ ಹೀಗಾಡುತ್ತೇವೆ?

* ಬಿಯರ್ ಮೇಲಿನ ನೊರೆ ಅಂತ ತಿಳ್ಕಂಡಿದ್ದರೆ ಇನ್ಹೇಗೆ ಆಡ್ತಿದ್ದೆವೋ… ಅಲ್ವಾ?!

 • ಹೆಡತಲೆ ಮಾದನಾಯ್ಕ, ಮೂಡ್ಲಪಾಳ್ಯ
 • ಹೆಣ್ಣಿನ ಅಂದದ ವರ್ಣನೆ, ಯಾರ ಮುಂದೆ-ಹೇಗೆ ಮಾಡಬೇಕು?

* ಕನ್ನಡಿ ಎತ್ತಿಟ್ಟು ದೀಪವಾರಿಸಬೇಕು-ಮುಂದಿನದು ನಿಮ್ಮಿಷ್ಟ!

 • ಕೆ.ಇ. ಚಂದ್ರಕಾಂತ, ಕೊಡಗು
 • ಇಂದು ಎಲ್ಲ ನಟ ನಟಿಯರೂ ಒಂದೊಂದು ಸಮಸ್ಯೆ ಎದುರಿಸುತ್ತಿದ್ದಾರಲ್ಲ?

* ಅವರ ನಟನೆಯೆಂಬ ಸಮಸ್ಯೆಯನ್ನು ನಾವೆದುರಿಸುತ್ತಿದ್ದೀವಲ್ಲ ಸ್ವಾಮಿ….

 • ಆಟೋರಾಜು, ಮಂಡ್ಯ
 • ನನಗೆ ಮದುವೆಯಾಗಿದೆ ಅಂದರೂ ಕೂಡ ನಿಮ್ಮನ್ನೇ ಲವ್ ಮಾಡ್ತೀನಿ ಅಂತಾಳಲ್ಲ ಸಾರ್?

* ನಿನಗೆ ಮದುವೆಯಾಗುವುದಕ್ಕೂ, ನನ್ನನ್ನು ಲವ್ ಮಾಡುವುದಕ್ಕೂ ಏನು ಸಂಬಂಧ ರಾಜೂ!

Leave a Reply

Your email address will not be published. Required fields are marked *