ಹಾಯ್ ಬೆಂಗಳೂರ್

ನಾ ಮೆಚ್ಚಿದವ ಎಷ್ಟು ಹೇಳಿದರೂ ಸಿಗರೇಟು ಬಿಡೋದಿಲ್ವಲ್ಲ…?

ಕೇಳಿ

ನಾ ಮೆಚ್ಚಿದವ ಎಷ್ಟು ಹೇಳಿದರೂ ಸಿಗರೇಟು ಬಿಡೋದಿಲ್ವಲ್ಲ…?

 • ಎಂ.ಬಿ. ರಂಗಸ್ವಾಮಿ, ಮೂಗೂರು
 • ಕಣ್ಣಲ್ಲೇ ಕಾಡುತ್ತಿದ್ದವಳು ಕೈಕೊಟ್ಟು ಕಾಣೆಯಾದಳು. ನಾನೇನು ಮಾಡಲೀಗ?

* ಮೈಯೆಲ್ಲ ಕಾಡುವವಳೊಬ್ಬಳನ್ನು ಅರ್ಜೆಂಟಿಗೆ ನೋಡಿಕೋ!

 • ಸೋಮಶೇಖರ್, ಸುರಪುರ
 • ಹುಡುಗೀರು ಕೊಡುವ ಮುತ್ತು ಮಕ್ಕಳ ಮುತ್ತಿಗಿಂತ ಸಿಹಿ ಎಂದು ಇಲ್ಲೊಬ್ಬನ ಅಂಬೋಣ. ಹೌದಾ?

* ಷುಗರ್‌ಲೆಸ್ ಮುತ್ತಿನ ಬಗ್ಗೆ ವಿವರ ಗೊತ್ತಿಲ್ಲದ ದಡ್ಡ!

 • ಶ್ರೀಪಾದ .ಎಚ್.ಕೆ, ಶಾಕಾಂಬರಿ ನಗರ
 • ‘ಹೆಣ್ಣಿಗೆ ಸೌಂದರ್ಯವನ್ನು ಕೊಟ್ಟ ದೇವರು ಮೆದುಳು ಕೊಡಲಿಲ್ಲ’ ಎನ್ನುವ ಸವಕಲು ಹೇಳಿಕೆ ಇನ್ನೂ ಚಾಲ್ತಿಯಲ್ಲಿರಬೇಕೆ?

* ಸವಕಲು ಸೌಂದರ್ಯಗಳಿರೋ ತನಕ ಇದು ಅನಿವಾರ್ಯ.

 • ಪ್ರವೀಣ್, ಚಳ್ಳಕೆರೆ
 • ಇಲ್ಲೊಬ್ಬಳು ‘ಚಿನ್ನಾ, ಬಂಗಾರೀ’ ಅಂತ ಕರೀಬೇಡ ಅಂತಾಳಲ್ಲ?!

* ಗೋಲ್ಡೀ ಅಂತ ಕೂಗಿ ನೋಡು… ಇಂಗ್ಲಿಷ್ ಅರ್ಥವಾಗುವ ಸಾಧ್ಯತೆಗಳಿವೆ.

 • ಆನಂದ್ .ಎಚ್.ಕೆ, ಸಿರುಗುಪ್ಪಾ
 • ಇಲ್ಲೊಬ್ಬನು ಸಾವಿರ ಸುಳ್ಳು ಹೇಳಿದರೂ ಮದುವೆ ಆಗುತ್ತಿಲ್ಲವೇಕೆ?

* ಈಗಾಗಲೇ ಮದುವೆಯಾದವಳ ಮುಂದೆ ಸಾವಿರ ಸುಳ್ಳು ಹೇಳಿದರೆ ಏನು ಪ್ರಯೋಜನ ಆನಂದೂ?

 • ಬಿ.ಸಿ. ರಾಜೇಶ್ವರಿ, ತುಮಕೂರು
 • ನಾ ಮೆಚ್ಚಿದವ ಎಷ್ಟು ಹೇಳಿದರೂ ಸಿಗರೇಟು ಬಿಡೋದಿಲ್ವಲ್ಲ…?

* ಸಿಗರೇಟಿನ ಸಮೇತ ಮೆಚ್ಚುವುದು ಅನಿವಾರ್ಯ ಜಾಣತನ ರಾಜೇಶ್ವರಿ!

 • ಶಿ.ಮಾ. ರಮೇಶ್, ಕೊಳ್ಳೇಗಾಲ
 • ತಮ್ಮ ಕೆಲಸವಾಗಬೇಕಾದಾಗ ಸಲುಗೆಯಿಂದ ಮಾತಾಡುವ ಹುಡುಗಿಯರು ಕೆಲಸ ಮುಗಿದ ಕೂಡಲೆ ವಿಚಿತ್ರ ಗಾಂಭೀರ್ಯ ತಾಳುತ್ತಾರಲ್ಲಾ?!

* ಅದು ‘ಕೆಲಸಲಿಗೆ’!

 • ಎಂ. ಫಾರೂಕ್ ಪೀರಜಾದೆ, ಗೋಕಾಕ್
 • ವಯಸ್ಸಾದ ಹೆಂಗಸರೂ ರೂಪವನ್ನು ಕಾಪಾಡಿಕೊಳ್ಳುವುದರ ಉದ್ದೇಶವೇನು?

* ಕಾಪಾಡಿಕೊಳ್ಳುವ ಹರಕತ್ತಿರುವುದೇ ಅವರಿಗೆ!

 • ಜಾಕೀರ್‌ ಹುಸೇನ್, ದೇವದುರ್ಗ
 • ಅನೇಕ ಹುಡುಗರನ್ನು ಏಕಕಾಲದಲ್ಲಿ ಪ್ರೀತಿಸುವ ಹುಡುಗಿಯ ಮನಸ್ಸು ಹೇಗಿರಬಹುದು?

* ನಿಜವಾದ ಪ್ರೀತಿ ಕಾಣದೆ… ಸಪ್ಪಗೆ!

 • ಸಿ.ಎಲ್.ಏಕನಾಥ್, ಚಿತ್ರದುರ್ಗ
 • ನನ್ನನ್ನು ನೋಡಿದ ಸುಂದರಿಯೊಬ್ಬಳು ‘ಅರಳಿದೆ ತನು-ಮನ’ ಅನ್ನುವುದರ ಹಿನ್ನೆಲೆ ಏನು?

* ನೀವೊಳ್ಳೆ ಅರಳೀಮರದ ಹಾಗೆ ಅಡ್ಡ ನಿಲ್ಲೋದ್ಯಾಕೆ ಏಕಣ್ಣಾ?

 

Leave a Reply

Your email address will not be published. Required fields are marked *