ಹಾಯ್ ಬೆಂಗಳೂರ್

ಕೇಳಿ: ಮಗುವನ್ನೆತ್ತಿಕೊಂಡು ಬಸ್ಸಿನಲ್ಲಿ ನಿಲ್ಲುವ ಮಹಿಳೆಯರ ಬಗ್ಗೆ ಯುವಕರಿಗೇಕೆ ಅನುಕಂಪ?

 • ಕೇಳಿ:

ಮಗುವನ್ನೆತ್ತಿಕೊಂಡು ಬಸ್ಸಿನಲ್ಲಿ ನಿಲ್ಲುವ ಮಹಿಳೆಯರ ಬಗ್ಗೆ ಯುವಕರಿಗೇಕೆ ಅನುಕಂಪ?

 • ಮಹ್ಮದ್ ಪೀರಜಾದೆ, ಗೋಕಾಕ್
 • ನಾನು ಪ್ರೀತಿಸುತ್ತಿರುವ ವಿಷಯ ಅವಳಿಗೆ ಗೊತ್ತಿಲ್ಲ. ಈಗ ನಾನು ಏನು ಮಾಡಲಿ?

* ಇನ್ನು ಮಾಡೋದೇನು ಬಂತು ಮಹ್ಮದ್? ಪ್ರಶ್ನೆ ಕೇಳ್ತಿರು.

 • ಕೆ. ಹರೀಶ್, ಶಿಂಗ್ರಿಹಳ್ಳಿ
 • ಹುಡುಗಿಯ ಮುಖವನ್ನೇ ನೋಡಿ ಹುಡುಗ ಒಪ್ಪಿಗೆ ತಿಳಿಸಬೇಕೆಂಬ ಪದ್ಧತಿ ಏಕಿದೆ?

* ದವಡೆ ಹಲ್ಲು ನೋಡಿ ಒಪ್ಪಿಗೆ ತಿಳಿಸುವ ಪ್ರಾಣಿಗಳು ಬೇರೆ ಇರ್ತವೆ!

 • ಕೆ. ಶ್ರೀನಿವಾಸ್, ಮೆಡೇಹಳ್ಳಿ
 • ಸಮಾರಂಭಗಳಲ್ಲಿ ಮಠಾಧಿಪತಿಗಳಿಗೆ ಕುಳಿತುಕೊಳ್ಳಲು ಬೇರೆಯದೇ ಆಸನ ಹಾಕುವುದೇಕೆ?

* ಇಲ್ಲದಿದ್ದರೆ ಅವರು ಶೀರ್ಷಾಸನ ಹಾಕಿ ಬಿಡುವ ಅಪಾಯಗಳಿರುತ್ತವೆ.

 • ಪ್ರಶಾಂತ್ .ಕೆ.ಆರ್., ನೇರಳಕಟ್ಟೆ
 • ತರುಣಿಯರು ತಮ್ಮ ವಯಸ್ಸನ್ನು ಮರೆಮಾಚುವುದೇಕೆ ಬ್ರದರ್?

* ಇನ್ನುಳಿದ ಯಾವುದೂ ಮರೆಮಾಚಲು ಅರ್ಹವಲ್ಲ ಎಂಬ ತಿಳಿವಳಿಕೆ.

 • ಬಿ. ಚಂದ್ರೇಗೌಡ, ಬೇಗೂರು
 • ಹೆಣ್ಣು, ಹೊನ್ನು, ಮಣ್ಣುಗಳ ವ್ಯಾಮೋಹ ತೊರೆದರೆ ಮಾತ್ರ ಮೋಕ್ಷ ಸಿಗುತ್ತಂತೆ, ಹೌದೆ?

* ಆಮೇಲೇನುಪಯೋಗ? ಅದೇ ಇಲ್ಲದ ಮೇಲೆ!

 • ಸರೋಜಾ ಛೆಬ್ಬಿ, ಶಿಗ್ಗಾಂವ್
 • ಅತಿಯಾಗಿ ಬಯಸಿದ ವಸ್ತು ಸಿಗೋದಿಲ್ಲವಂತೆ ಹೌದಾ?

* ಸಿಕ್ಕಮೇಲೆ ಅದನ್ನು ಅತಿಯಾಗಿ ಬಯಸಿರಲಿಲ್ವೇನೋ ಅನ್ನಿಸುತ್ತದಂತೆ!

 • ಗೋವಿಂದ್ ಯಾದವ್, ಉಪ್ಪಾರಹಳ್ಳಿ
 • ದೇವರು ನಂಬಿದವರನ್ನೇ ಯಾಕೆ ವಂಚಿಸುತ್ತಾನೆ ಬ್ರದರ್?

* ನಂಬದವರನ್ನು ವಂಚಿಸೋದಾದರೂ ಹೇಗೆ ಮರೀ?

 • ಈರೀಶ, ಶಿಂಗ್ರಿಹಳ್ಳಿ
 • ಮದುವೆಯ ನಂತರದ ಮೊದಲ ರಾತ್ರಿಯಂದು ಸೋಲುವುದು ಗಂಡೋ? ಹೆಣ್ಣೋ?

* ವಿವೇಕ!

 • ಮಹ್ಮದ್ ಫಾರೂಕ್, ಗೋಕಾಕ್
 • ಹೆಣ್ಣು ಗಂಡು ಜೊತೆಯಾಗಿರಲು ಮದುವೆಯೇ ಆಗಬೇಕೆ?

* ಇಲ್ಲ! ಮದುವೆಯಾದ ಮೇಲೆ ಮಾತ್ರ ಅನಿವಾರ್ಯ. ಇರಲೇಬೇಕಾಗುತ್ತದೆ!

 • ಬಿ.ಎಂ.ಭಾಗ್ಯಗೌಡ, ಬಿನ್ನಡಿ
 • ಮಗುವನ್ನೆತ್ತಿಕೊಂಡು ಬಸ್ಸಿನಲ್ಲಿ ನಿಲ್ಲುವ ಮಹಿಳೆಯರ ಬಗ್ಗೆ ಯುವಕರಿಗೇಕೆ ಅನುಕಂಪ?

* ಅನುಕಂಪವಲ್ಲ. ಮಗು ಎಂದಾದರೂ ಬೆಳೆದು ನಿಂತೀತೆಂಬ ದೂರಾಸೆ!

 • ವಸಂತಕುಮಾರ್, ತ್ಯಾಗರಾಜನಗರ
 • ನನ್ನ ಹುಡುಗಿ ಸ್ವಾತಂತ್ರ್ಯವನ್ನು ಕೇಳಿ ಕೇಳಿ ನೋವುಂಟು ಮಾಡುತ್ತಿದ್ದಾಳಲ್ಲ?

* ಸ್ವಾತಂತ್ರ್ಯ ಯೋಧೆ! ಎಚ್ಚರವಾಗಿರು, ಕಡೆತನಕ ಪಿಂಚಣಿ ಕೊಡಬೇಕಾದೀತು!

Leave a Reply

Your email address will not be published. Required fields are marked *