ಹಾಯ್ ಬೆಂಗಳೂರ್

ಸ್ತಬ್ಧವಾಯ್ತು ಅಪ್ಪಟ ಪ್ರತಿಭೆಯ ಮಾನವೀಯ ಸಂಚಾರ…

ಸ್ತಬ್ಧವಾಯ್ತು ಅಪ್ಪಟ ಪ್ರತಿಭೆಯ ಮಾನವೀಯ ಸಂಚಾರ…

ಸಂಚಾರಿ ವಿಜಯ್ ರಂಗಭೂಮಿ ಚಿತ್ರರಂಗಕ್ಕೆ ಕೊಡಮಾಡಿದ ಗಟ್ಟಿ ಪ್ರತಿಭೆ. ಯಾವ ಪ್ರಾತ್ರ ಸಿಕ್ಕರೂ ನುಂಗಿಕೊಂಡು ನಟಿಸೋ ಛಾತಿಯಿದ್ದ ಅವರು, ಅದಕ್ಕೆ ತಕ್ಕುದಾದ ಅವಕಾಶಗಳನ್ನೇ ತನ್ನದಾಗಿಸಿಕೊಂಡಿದ್ದರು. ಕಲಾತ್ಮಕ ಮಾತ್ರವಲ್ಲದೇ ಕಮರ್ಶಿಯಲ್ ಹೀರೋ ಆಗಿಯೂ ಸೈ ಅನ್ನಿಸಿಕೊಳ್ಳುವ ಹಾದಿಯಲ್ಲಿದ್ದರು. ಇದು ಅವರ ಕಲಾ ಜೀವನದ ವಿಚಾರ.

ಕೋಟಿ ಹರಕೆ, ಹಾರೈಕೆಗಳೆಲ್ಲವನ್ನು ಕ್ರೂರಿ ವಿಧಿ ವ್ಯರ್ಥವಾಗಿಸಿದೆ. ನಟ ಸಂಚಾರಿ ವಿಜಯ್ ಅಪಘಾತಕ್ಕೀಡಾದ ಸುದ್ದಿ ತಿಳಿಯುತ್ತಲೇ ಅದೆಷ್ಟು ಜೀವಗಳು ಗುಣಮುಖರಾಗುವಂತೆ ಬೇಡಿಕೊಂಡಿದ್ದವೋ, ಅದೆಷ್ಟು ಮನಸುಗಳು ಮೌನದಲ್ಲೇ ಪ್ರಾರ್ಥಿಸಿದ್ದವೋ… ಕೆಲವೊಮ್ಮೆ ಆತ್ಮದ ಕೋರಿಕೆಯೂ ವ್ಯರ್ಥ ಆಲಾಪವಾಗಿ ಬಿಡುತ್ತೆ. ಯಾವ ಸುದ್ದಿಯನ್ನು ಕನಸಲ್ಲಿಯೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತಿತ್ತೋ ಅದೇ ಈಗ ವಾಸ್ತವವಾಗಿ ಎದುರು ನಿಂತಿದೆ; ಸಂಚಾರಿ ವಿಜಯ್ ಇನ್ನಿಲ್ಲವೆಂಬ ಆಘಾತದ ಮೂಲಕ…

ಜಿ.ಎಸ್.ಯುಧಿಷ್ಟರ ಅವರ ನಟಿ ನವ್ಯ ನಾಯರ್ ಕುರಿತ ಆತ್ಮಕಥನ “ಧನ್ಯವೀಣಾ” ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಜೊತೆ ಮಾತುಕತೆಯ ಕ್ಷಣ.

ಮೊದಲ ಚಿತ್ರದಲ್ಲಿಯೇ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಗಳಿಸೋದು ಸಾಮಾನ್ಯದ ಸಂಗತಿಯಲ್ಲ. ಆದರೆ ಮಲೆನಾಡಿನ ನಂಟಿನೊಂದಿಗೆ ಬೆಳೆದು ಬಂದಿದ್ದ ಸಾಧಾರಣ ಮೈಕಟ್ಟಿನ ಅಸಾಧಾರಣ ಹುಡುಗ ವಿಜಯ್ ಅದೆಲ್ಲವನ್ನೂ ಸಾಧ್ಯವಾಗಿಸಿಕೊಂಡಿದ್ದರು. ಅಂಥಾದ್ದೊಂದು ಯಶಸ್ಸು ಸಿಕ್ಕ ನಂತರವೂ ತಾವಾಗಿಯೇ ಉಳಿದಿದ್ದ ವಿಜಯ್ ಅವರದ್ದು ಸದಾ ಸಮಾಜಮುಖಿಯಾಗಿ ತುಡಿಯುವ ಮನಸಾಗಿತ್ತು. ಕೋವಿಡ್ ಸಂದರ್ಭದಲ್ಲಿ ಸಹಾಯ ಯಾಚಿಸಿದವರ ಮನೆ ಬಾಗಿಲಿಗೆ ಖುದ್ದಾಗಿ ಆಹಾರ ಕಿಟ್ ವಿತರಿಸಿ ಬರುತ್ತಿದ್ದ ಅವರ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ.


ಸಂಚಾರಿ ವಿಜಯ್ ರಂಗಭೂಮಿ ಚಿತ್ರರಂಗಕ್ಕೆ ಕೊಡಮಾಡಿದ ಗಟ್ಟಿ ಪ್ರತಿಭೆ. ಯಾವ ಪ್ರಾತ್ರ ಸಿಕ್ಕರೂ ನುಂಗಿಕೊಂಡು ನಟಿಸೋ ಛಾತಿಯಿದ್ದ ಅವರು, ಅದಕ್ಕೆ ತಕ್ಕುದಾದ ಅವಕಾಶಗಳನ್ನೇ ತನ್ನದಾಗಿಸಿಕೊಂಡಿದ್ದರು. ಕಲಾತ್ಮಕ ಮಾತ್ರವಲ್ಲದೇ ಕಮರ್ಶಿಯಲ್ ಹೀರೋ ಆಗಿಯೂ ಸೈ ಅನ್ನಿಸಿಕೊಳ್ಳುವ ಹಾದಿಯಲ್ಲಿದ್ದರು. ಇದು ಅವರ ಕಲಾ ಜೀವನದ ವಿಚಾರ. ಇನ್ನು ಸಾಮಾಜಿಕ ಬದುಕಿನ ವಿಚಾರಕ್ಕೆ ಬಂದರೆ ಖುದ್ದಾಗಿ ತಾನೇ ಅಟನುಭವಿಸಿದ್ದ ನೋವುಗಳು ಅವರನ್ನು ಸದಾ ಜನರ ನಡುವೆ ಉಳಿಸಿದ್ದವು. ಕಳೆದ ಕೊಡಗು ಭೂಕುಸಿತದ ಸಂದರ್ಭದಿಂದ, ಕೋವಿಡ್ ಕಾಲದವರೆಗೂ ವಿಜಯ್ ಅಸಹಾಯಕರ ನೆರವಿಗೆ ನಿಂತಿದ್ದರು. ಇಂಥಾ ಮಾನವೀಯ ಗುಣಗಳ ಯುವ ನಟನ ಅಕಾಲಿಕ ನಿರ್ಗಮನ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಈ ಸಮಾಜಕ್ಕೂ ತುಂಬಲಾರದ ನಷ್ಟ.

 

ಭಾವನಾ ಬೆಳಗೆರೆ

Leave a Reply

Your email address will not be published. Required fields are marked *