“ಗುಪ್ತಚರ ಇಲಾಖೆಯವರೇನು ಕತ್ತೆ ಕಾಯ್ತಾ ಇದಾರಾ?” :ಮುತಾಲಿಕ್

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್
  • “ಎಲ್ಲಾ ಜಿಲ್ಲೆಗಳಲ್ಲೂ ಕೂಡ ಡ್ರಗ್ ಮಾಫಿಯಾ ಕೆಲಸ ಮಾಡ್ತಾ ಇದೆ. ಪೊಲೀಸ್ ಇಲಾಖೆಗೆ ಇದರ ಬಗೆಗೆ ಹೆಜ್ಜೆ ಹೆಜ್ಜೆಗೂ ಗೊತ್ತಿದೆ.  ಪ್ರತಿಯೊಂದು ವಿಷಯವೂ ಗೊತ್ತಿದೆ.” ಹೀಗಂತ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಬ್ಬರಿಸಿದ್ದಾರೆ.
  • “ಈಗ ನೋಡಿ,… ಮೊನ್ನೆ ರೇಡ್ ಮಾಡಿದ್ದು ದೆಹಲಿಯಿಂದ ಬಂದ ಅಧಿಕಾರಿಗಳು. ಹಾಗಾದರೆ ಕರ್ನಾಟಕದ ಗುಪ್ತಚರ ಇಲಾಖೆಯವರೇನು ಕತ್ತೆ ಕಾಯ್ತಾ ಇದಾರಾ? ಏನ್ ಸಗಣಿ ತಿಂತಾ ಇದಾರಾ? “ ಎಂದು ಮುತಾಲಿಕ್ ಕೆಂಡಾಮಂಡಲ ಆಗಿದ್ದಾರೆ.
  • “ಯಾವ್ಯಾವ ಪಬ್ ನಲ್ಲಿ ಏನೇನ್ ನಡೀತಾ ಇದೆ ಎಂಬುದು ಗೊತ್ತಿದೆ ಅವರಿಗೆ. ಆದರೆ ರಾಜಕಾರಣಿಗಳು ಅವರ ಕೈ ಕಟ್ಟಿ ಹಾಕಿರೋದ್ರಿಂದ ಇವ್ಯಾವುದೂ ಹೊರಕ್ಕೆ ಬರ್ತಾ ಇಲ್ಲ. ಯಾಕೆಂದ್ರೆ ರಾಜಕಾರಣಿಗಳದ್ದೇ ಕ್ಲಬ್ಬುಗಳು, ಪಬ್ಬುಗಳು, ವೈನ್ ಸ್ಟೋರ್ ಗಳು ಇದಾವೆ. ಇವರಿಂದಲೇ ಸಾವಿರಾರು ಕೋಟಿ ಅವ್ಯವಹಾರ ಆಗ್ತಿದೆ. ವೈನ್ ಲಾಬಿ ಮತ್ತು ಡ್ರಗ್ ಲಾಬಿ ಇಡೀ ದೇಶದ ರಾಜಕೀಯವನ್ನು ಕೈಲಿಟ್ಟುಕೊಂಡಿದೆ.” – ಹೀಗಂತ ಪ್ರಮೋದ್ ಮುತಾಲಿಕ್ ಕೆಂಡ ಕಾರಿದ್ದಾರೆ.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

Go to Top