ಹಾಯ್ ಬೆಂಗಳೂರ್

ಭಾರತದ ಮೊದಲ ಮೆಟ್ರೋ ರೈಲು

ಭಾರತದ ಪ್ರಪ್ರಥಮ ಮೆಟ್ರೋ ರೈಲು ಆರಂಭಗೊಂಡಿದ್ದು ಕೋಲ್ಕೊತ್ತಾದಲ್ಲಿ. ಕೋಲ್ಕೊತ್ತಾ ನಗರದ ಜನ ಸಂದಣಿ ಹಾಗೂ ಟ್ರಾಫಿಕ್ ಜಾಮ್ ನೋಡಿ ಇಂಥದ್ದೊಂದು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕೆಂದು ಕನಸು ಕಂಡವರು ೧೯೪೯ರಲ್ಲಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಬಿ.ಸಿ.ರಾಯ್ ಅವರು.

ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬಂದದ್ದು ಮಾತ್ರ ೧೯೭೦ರಲ್ಲಿ. ಈ ಇಡೀ ಯೋಜನೆಯ ಪ್ರಮುಖ ರೂವಾರಿಯಾದ ಡಾ.ಈ.ಶ್ರೀಧರನ್ ದಕ್ಷಿಣ ಭಾರತದ ಕೇರಳದವರು ಎಂಬುದು ವಿಶೇಷ. ಇಂಜಿನೀರಿಂಗ್ ಪದ ವೀಧರರಾಗಿದ್ದ ಶ್ರೀಧರನ್ ಕಾರ್ಯಕ್ಷಮತೆ ಅದೆಷ್ಟಿತ್ತೆಂದರೆ, ೧೯೬೩ರಲ್ಲಿ ಚಂಡಮಾರುತದಿಂದ ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮೇಶ್ವರ ಬಳಿ ಇರುವ ಪಂಬನ್ ಬ್ರಿಡ್ಜ್ ಕುಸಿದು ಬಿತ್ತು. ಇವರಿಗೆ ಅದನ್ನು ರಿಪೇರಿ ಮಾಡಲು ನೀಡಿದ್ದ ಗಡುವು ಕೇವಲ ಆರು ತಿಂಗಳು. ಆದರೆ  ಕೇವಲ ನಲವತ್ತಾರು ದಿನಗಳಲ್ಲಿ ಅದನ್ನು ದುರಸ್ಥಿ ಪಡಿಸಿದ್ದರು. ಶ್ರೀಧರನ್ ದಕ್ಷತೆಯ ಬಗ್ಗೆ ನಂಬಿಕೆ ಇದ್ದಿದ್ದರಿಂದಲೇ ರೇಲ್ವೆ ಇಲಾಖೆ ಕೋಲ್ಕೊತ್ತಾ ಮೆಟ್ರೋ ಯೋಜನೆಗೆ ಇವರನ್ನೇ ಮುಖ್ಯಸ್ಥರನ್ನಾಗಿಸಿತು. ಸುಮಾರು ಹದಿನಾಲ್ಕು ವರ್ಷಗಳ ಕಾಲ ನಡೆದ ಕಾಮಗಾರಿಯ ನಂತರ ಏಷ್ಯಾದ ಐದನೇ ಹಾಗೂ ಭಾರತದ ಮೆಟ್ರೋ ರೈಲು ೧೯೮೪ರಲ್ಲಿ ಪ್ರಪ್ರಥಮ ಭಾರಿಗೆ ಹಳಿಗಳ ಮೇಲೆ ಸಂಚರಿಸಿತು. ಇಡೀ ಪಶ್ಚಿಮ ಬಂಗಾಳ ಅಂದು ಡಾ.ಈ.ಶ್ರೀಧರನ್‌ಗೆ ಹ್ಯಾಟ್ಸ್ ಆಫ್ ಅಂದಿತ್ತು!

Leave a Reply

Your email address will not be published. Required fields are marked *