ಹಾಯ್ ಬೆಂಗಳೂರ್

ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಗೆಲುವು: ಕೊಹ್ಲಿ ಹೆಸರಿನಲ್ಲಿ ಮತ್ತೊಂದು ದಾಖಲೆ

ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಎರಡನೇ ಟೆಸ್ಟನ್ನು ಗೆದ್ದಿರುವುದು ಎಲ್ಲರಿಗೂ ಖುಷಿ ತಂದಿರುವ ವಿಚಾರ. ಆದರೆ ಅದಕ್ಕಿಂತಲೂ ಕೊಹ್ಲಿಗೆ ಈ ಟೆಸ್ಟ್ ಬಹಳ ವಿಶೇಷ. ಯಾಕೆ ಅಂತೀರಾ? ನಾಯಕನಾಗಿ ತವರು ನೆಲದಲ್ಲಿ ಅವರು ಇಪ್ಪತ್ತೊಂದು ಟೆಸ್ಟ್ ಗಳನ್ನು ಗೆದ್ದಿದ್ದಾರೆ. ಆ ಮೂಲಕ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ.

ನಾಯಕನಾಗಿ ಧೋನಿ ಒಟ್ಟು ಮೂವತ್ತು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 21ನ್ನು ಜಯಗಳಿಸಿದ್ದಾರೆ. ಮೂರನ್ನು ಸೋತಿದ್ದಾರೆ. ಉಳಿದ ಆರು ಪಂದ್ಯಗಳು ಡ್ರಾ ಆಗಿವೆ. ಅದೇ ಕೊಹ್ಲಿ ಇಪ್ಪತ್ತೆಂಟು ಟೆಸ್ಟ್ ಗಳನ್ನು ಆಡಿದ್ದಾರೆ. ಅದರಲ್ಲಿ ಇಪ್ಪತ್ತೊಂದನ್ನು ಜಯಗಳಿಸಿದ್ದಾರೆ. ಎರಡನ್ನು ಸೋತಿದ್ದಾರೆ. ಐದು ಪಂದ್ಯಗಳು ಡ್ರಾ ಆಗಿವೆ.

ಕೊಹ್ಲಿ ಇನ್ನೂ ಟೆಸ್ಟ್ ನಿಂದ ನಿವೃತ್ತಿ ಹೊಂದಿರದ ಕಾರಣ ಇನ್ನಷ್ಟು ಭರ್ಜರಿ ಆಟವನ್ನು ಅವರಿಂದ ನಿರೀಕ್ಷೆ ಮಾಡಬಹುದು ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *