ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಯಂತ್ರಣ ಮೀರಿ ಏರುತ್ತಲೇ ಇದೆ.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದ್ದು ಜನರ ಜೇಬಿಗೆ ದಿನದಿಂದ ದಿನಕ್ಕೆ ನಿಧಾನವಾಗಿ ಕತ್ತರಿ ಬೀಳುತ್ತಲೇ ಇದೆ. ಕೆಲಸದ ಒತ್ತಡದಲ್ಲಿ ಅದು ಜನಸಾಮಾನ್ಯರಿಗೆ ಅರಿವಿಗೆ ಬರುತ್ತಿಲ್ಲ ಅಷ್ಟೇ. ಇಂದು ಶನಿವಾರ ಕೂಡ ತೈಲೋತ್ಪನ್ನಗಳ ದರದಲ್ಲಿ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಂತೂ ಪೆಟ್ರೋಲ್ ದರ ತೊಂಬತ್ತು ರುಪಾಯಿ ದಾಟಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರದಲ್ಲಿ 40 ಪೈಸೆ ಏರಿಕೆಯಾಗಿದ್ದು ಪ್ರತಿ ಲೀಟರ್ ಪೆಟ್ರೋಲ್ ದರ 93.59 ರೂಗೆ ಹೋಗಿ ತಲುಪಿದೆ. ಡೀಸೆಲ್ ದರ ಕೂಡ 39 ಪೈಸೆ ಏರಿಕೆಯಾಗಿದ್ದು ಪ್ರತಿ ಲೀಟರ್ ಡೀಸೆಲ್ ದರ 85.82 ರೂ ಗೆ ಏರಿಕೆಯಾಗಿದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 38 ಪೈಸೆ ಏರಿಕೆಯಾಗಿ 97 ರೂಪಾಯಿಗೆ ತಲುಪಿದೆ. ಡೀಸೆಲ್ ದರದಲ್ಲಿ 40 ಪೈಸೆ ಏರಿಕೆಯಾಗಿ 88 ರೂಪಾಯಿಗೂ ಹೆಚ್ಚಾಗಿದೆ.
ಅತ್ತ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಗೆ 93 ರುಪಾಯಿಯಾದರೆ, ಡೀಸೆಲ್ ರೇಟ್ 85 ರುಪಾಯಿಗೂ ಹೆಚ್ಚಾಗಿದೆ.
ಅತ್ತ ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ 92 ರುಪಾಯಿಗೆ ಮತ್ತು ಡೀಸೆಲ್ 84.54 ರುಪಾಯಿಗೆ ಏರಿಕೆಯಾಗಿ ಗ್ರಾಹಕರ ಜೇಬುನಲ್ಲಿದ್ದ ದುಡ್ಡು ಐಸ್ ನಂತೆ ಕರಗುತ್ತಿದೆ.