ಸಂಬರ್ಗಿ ವಿಚಾರಣೆವೇಳೆ ಸಿಕ್ಕಿತಾ ಮಹತ್ವದ ಮಾಹಿತಿಗಳು?

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್
  • ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವಿರುದ್ಧ ತೊಡೆ ತಟ್ಟಿ ಹೂಂಕರಿಸುತ್ತಿರುವ ಪ್ರಶಾಂತ್ ಸಂಬರ್ಗಿಯನ್ನು ಇಂದು ಸಿಸಿಬಿ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಸಿಸಿಬಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ ಸಂಬರ್ಗಿ ತಾನು ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಿರುವೆ ಎಂದು ಹೇಳಿಕೊಂಡಿದ್ದಾರೆ.
  • ಸಂಜನಾ ಬಗ್ಗೆ ನಾನು ಯಾವುದೇ ದಾಖಲೆ ನೀಡಿಲ್ಲ. ಆದರೆ ಜಮೀರ್ ಅಹಮದ್ ಮತ್ತು ಫಾಜಿಲ್ ಗಿರುವ ನಂಟಿನ ಬಗ್ಗೆ ದಾಖಲೆ ನೀಡಿದ್ದೇನೆ. ಜಮೀರ್ ಕೊಲೊಂಬೋಗೆ ಹೋಗಿದ್ದರ ಬಗ್ಗೆ ದಾಖಲೆ ನೀಡಿದ್ದೇನೆ. ಇನ್ನಷ್ಟು ವಿಷಯಗಳ ಕುರಿತು ಪೊಲೀಸರು ಮಾಹಿತಿ ಕೇಳಿದ್ದಾರೆ. ಮುಂದಿನ ಶುಕ್ರವಾರ ಮತ್ತೆ ವಿಚಾರಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಅಂದು ಖಂಡಿತ ಅವರು ಹೇಳಿರುವ ದಾಖಲೆಗಳನ್ನು ಸಂಗ್ರಹಿಸಿಕೊಂಡು ಬರುತ್ತೇನೆ ಎಂದು ಸಂಬರ್ಗಿ ತಿಳಿಸಿದ್ದಾರೆ.
  • ನಾನು ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿಲ್ಲ. ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದೇನೆ. ನಾನು ಯಾವುದೇ ಪಕ್ಷದ ವಕ್ತಾರನೂ ಅಲ್ಲ ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಂಬರ್ಗಿ ಸ್ಪಷ್ಟನೆ ನೀಡಿದ್ದಾರೆ.
  • ಈ ಮಧ್ಯೆ ಜಮೀರ್ ಅಹಮದ್ ಖಾನ್ ತಾನು ಕುಮಾರಸ್ವಾಮಿ ಜೊತೆಗೆ ಕೊಲೊಂಬೋಗೆ ಹೋಗಿದ್ದಾಗಿ ಹೇಳಿದ್ದಾರೆ.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

Go to Top