ಹಾಯ್ ಬೆಂಗಳೂರ್

ಎತ್ತರದ ಹುಡುಗೀರೇ ಹೀಲ್ಡ್ ಚಪ್ಪಲಿ ಧರಿಸಲು ಕಾರಣವೇನು?

ಕೇಳಿ:

ಎತ್ತರದ ಹುಡುಗೀರೇ ಹೀಲ್ಡ್ ಚಪ್ಪಲಿ ಧರಿಸಲು ಕಾರಣವೇನು?

 • ಬಿ. ಚಂದ್ರೇಗೌಡ, ಬೇಗೂರು
 • ಬೇರೆ ರಾತ್ರಿಗಳಿಗಿಲ್ಲದ ಮಹತ್ವ ಪ್ರಥಮ ರಾತ್ರಿಗೇ ಏಕೆ?

* ಅದು ನವರಾತ್ರಿ ಮತ್ತು ಶಿವರಾತ್ರಿಗಳಿಗಿಂತ ನಿರ್ಣಾಯಕವಾದುದೆಂಬ ಕಾರಣಕ್ಕಾಗಿ!

 • ಶಿವಕುಮಾರಸ್ವಾಮಿ, ಅರಕಲವಾಡಿ
 • ಲವ್‌ಗೆ ಬ್ರೇಕ್ ಯಾಕಿಲ್ಲ ಗುರು?

* ಸಿಡಿಲಿಗೆ ಹಾರ್‍ನ್ ಯಾಕಿಲ್ಲವೆಂದು ಕೇಳಿದರೆ ಏನು ಹೇಳಲಿ?

 • ಆಟೋ ರಾಜು, ಮಂಡ್ಯ
 • ಪ್ರಾಣ ಕೊಡಲು ಸಿದ್ಧಳಿರುವ ಪ್ರೇಯಸಿ ಒಂದು ಮುತ್ತು ಕೊಡಲು ಹಿಂಜರಿಯುವಳಲ್ಲ?

* ಬ್ಯಾಂಕು ಎಂದಾದರೂ ಭಿಕ್ಷೆ ಕೊಡುತ್ತಾ ರಾಜೂ?

 • ಚರಣರಾಜ್, ಮಂಗಳೂರು
 • ಮನುಷ್ಯ ಏನೇ ಪ್ರಯತ್ನ ಪಟ್ಟರೂ ಅಪೂರ್ಣವಾಗಿಯೇ ಉಳಿಯುವ ಕೆಲಸ ಯಾವುದು?

* ಮನುಷ್ಯನಾಗುವಿಕೆ!

 • ಸುಮ, ಚಳ್ಳಕೆರೆ
 • ಇಲ್ಲೊಬ್ಬ ಯಾವಾಗಲೂ ‘ನಿನ್ನ ಬಿಟ್ಟು ಬಾಳಲ್ಲ’ ಅಂತಾನಲ್ಲ?

* ಸಿನೆಮಾ ಹಾಡಿಗೆಲ್ಲ ಸೀರಿಯಸ್ಸಾಗೋದು ಯಾಕೆ ಸುಮಾ?

 • ಶ್ರೀರಂಗರಾಜು, ಪಿರಿಯಾಪಟ್ಟಣ
 • ಬೆಂಗಳೂರಿನಲ್ಲಿ ಹುಚ್ಚಾಸ್ಪತ್ರೆಗಿಂತ ಅಪಾಯಕಾರಿಯಾದುದು ಯಾವುದು?

* ಸಾಹಿತ್ಯ ಪರಿಷತ್ತು!

 • ನಾವುಂದ .ಎಸ್.ಜೆ.ಬಿ.
 • ಈ ಪ್ರಪಂಚದಲ್ಲಿ ಹುಡುಗಿಯರೇ ಇರದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ?

* ಅಜ್ಜಿಯರ ಸಂಭ್ರಮಕ್ಕೆ ಆಗ ಅಡ್ಡಿಯೆಲ್ಲಿ?

 • ಮಂಜುನಾಥ್, ಶಿರಾ
 • ಎತ್ತರದ ಹುಡುಗೀರೇ ಹೀಲ್ಡ್ ಚಪ್ಪಲಿ ಧರಿಸಲು ಕಾರಣವೇನು?

* ಇಣುಕುವ ಕುಳ್ಳರ ವಿರುದ್ಧ ಮುಂಜಾಗ್ರತೆ!

 • ನಿರ್ಮಲ, ಗುಲಬರ್ಗಾ
 • ನಮ್ಮವರು ಮುತ್ತಿಕ್ಕಿದರೆ ಮುನಿಸಿಕೊಳ್ಳುತ್ತಾರೆ. ಇದ್ಯಾವ ರೋಗ?

* ಅದು ಸಾಮಾನ್ಯವಾಗಿ ಸ್ಕೂಟರುಗಳಿಗೆ ಬರುತ್ತೆ -ಸ್ಟಾರ್ಟಿಂಗ್ ಟ್ರಬಲ್ಲು!

 • ಕಾಮಾಕ್ಷಿ, ಕನಕಪುರ
 • ಅಪ್ಪಿಕೊಂಡರೆ ಮಕ್ಕಳಾಗುತ್ತವೆ ಅಂತ ನಮ್ಮಜ್ಜಿ ಹೇಳುತ್ತಿದ್ದರು. ಅದು ನಿಜವೇ?

* ಛೇ, ಎಷ್ಟೆಲ್ಲ ಕಷ್ಟಪಟ್ಟೆನಲ್ರೀ?

 • ಜೀವನಕುಮಾರಿ, ಜೇನುಹಳ್ಳಿ
 • ನನಗಿಂತ ಕಿರಿಯನನ್ನು ಮದುವೆಯಾಗಬೇಕೆಂದಿದ್ದೇನೆ. ಆದೀತೇ?

* ಎನಗಿಂತ ಕಿರಿಯರಿಲ್ಲ! ಪ್ರಯತ್ನಿಸಿ ನೋಡು.

 

Leave a Reply

Your email address will not be published. Required fields are marked *