ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಗುಣಮುಖ್ಯ ಎಂಬ bull shit

  • ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಅಧ್ಯಾಯ-೧೨

ಗುಣಮುಖ್ಯ ಎಂಬ bull shit

ಪ್ರೀತಿಸತೊಡಗಿದ ಮೂರನೇ ದಿನವೇ `ಗುಣ ಮುಖ್ಯ’ ಎಂದು ಮಾತನಾಡುವ ಹುಂಬರಿಗೆ ಅವಳ ಮುಗುಳ್ನಗೆ ಗುಣವಲ್ಲವೆಂದೂ, ಆಕರ್ಷಣೆಯಿಂದ ಜನ್ಯವಾದ ಪ್ರತಿಕ್ರಿಯೆ ಎಂದೂ-ಯಾರಾದರೂ ವಿವರಿಸಬೇಕಾಗುತ್ತದೆ.

ಅವಳು ಇವನನ್ನು ಪ್ರೀತಿಸುತ್ತಾಳೆ. ಎಷ್ಟು ಪ್ರೀತಿಸುತ್ತಾಳೆ ಎಂಬುದಕ್ಕಿಂತ ಏಕೆ ಪ್ರೀತಿಸುತ್ತಾಳೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸುಮ್ಮನೆ ಮುಗುಳ್ನಗುವವಳ ಹಿಂದೆ ನಡೆದು ಹೋಗುವ ಹುಡುಗ ಹೆಚ್ಚಿನ ಸಲ ಬರಿಗೈಲಿ ವಾಪಸು ಬಂದಿರುತ್ತಾನೆ. ಆದ್ದರಿಂದಲೇ ಹೇಳಿದ್ದು; I love you ಅನ್ನುವ ಮುನ್ನ ನಮ್ಮ ಆಯ್ಕೆ ಸರಿಯಿದೆಯೇ ಎಂಬುದನ್ನು ಕೇಳಿಕೊಳ್ಳಿ ಅಂತ.

`ನಾವು ಪ್ರೀತಿಸುತ್ತಿದ್ದೇವೆ; ನಮಗೆ ಮದುವೆ ಮಾಡಿಸಿ’ ಎಂದು ನನ್ನಲ್ಲಿಗೆ ಬರುವ ಪ್ರತಿ ಜೋಡಿಯಲ್ಲೂ ನಾನು ಪರೀಕ್ಷಿಸುವುದು ಈ ಆಯ್ಕೆಯ ಸಂಗತಿಯನ್ನೇ. ಹುಡುಗ-ಹುಡುಗಿ ಎಷ್ಟು ಇಂಟೆನ್ಸ್ ಆಗಿ ಪ್ರೀತಿಸುತ್ತಾರೆ ಮತ್ತು ಎಷ್ಟು comfortable ಆಗಿ ಒಬ್ಬರನ್ನೊಬ್ಬರು ಬಾಳಿಸಲು ಯೋಗ್ಯರಾಗಿದ್ದಾರೆ-ಎಂಬುದನ್ನು ಪದೇಪದೆ ವೆರಿಫೈ ಮಾಡುತ್ತೇನೆ. ಪ್ರೀತಿಸಿದ ಮಾತ್ರಕ್ಕೆ ಅದು “Made for each other’ ಜೋಡಿಯಾಗುವುದಿಲ್ಲ. ಬೇರ್‍ಯಾರೂ ಸಿಗಲಿಲ್ಲ; ಅಥವಾ ಅಂಥವರ್‍ಯಾರೂ ನನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕಾಗಿ ನೀವು ಅವಳನ್ನು ಪ್ರೀತಿಸಿದ್ದರೆ- I am sorry. ನೀವು ಅವಸರಪಟ್ಟಿರಿ!

ಹಾಗಾದರೆ?

-ರವಿ ಬೆಳಗೆರೆ

Leave a Reply

Your email address will not be published. Required fields are marked *