ಗೌರವವೆಂದರೆ ಇದಲ್ಲವೇ?

in ಜಿಲ್ಲಾ ಸುದ್ದಿಗಳು/ಬೀಟ್ಸ್ ।ಪೇಜ್

ಗೌರವವೆಂದರೆ ಇದಲ್ಲವೇ?

ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ೧೯೭೯ರಲ್ಲಿ ನಿಧನರಾದಾಗ ಅವರ ಆದರ್ಶಗಳನ್ನು ಚಿರಸ್ಥಾಯಿಯಾಗಿಸಲು ಎಲ್ಲಾ ರಾಜ್ಯಗಳೂ ಅವರ ಚಿತಾಭಸ್ಮವನ್ನು ತಂದು ಗೌರವಿಸಿ, ನದಿಗಳಲ್ಲಿ ವಿಸರ್ಜಿಸುವ ನಿರ್ಧಾರ ಮಾಡಿದವು. ಕರ್ನಾಟಕದಲ್ಲಿ ಆಗ ಆಳ್ವಿಕೆಯಲ್ಲಿದ್ದ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ನಿರಾಸಕ್ತಿ ತೋರಿತು. ಆಗ ಸಭೆ ಸೇರಿದ ರಾಜ್ಯದ ಸಮಾಜವಾದಿ ಮುಖಂಡರಾದ ಕಡಿದಾಳ್ ಮಂಜಪ್ಪ, ಸರ್ದಾರ್ ವೆಂಕಟರಾಮಯ್ಯ, ಶ್ರೀನಿವಾಸರಾವ್ ಹಾಗೂ ಎಚ್.ಎಸ್.ದೊರೆಸ್ವಾಮಿ ಮುಂತಾದವರು ಸಭೆ ಸೇರಿ ಆಗ ದೆಹಲಿ ಪ್ರವಾಸದಲ್ಲಿದ್ದ ಗಾಂಧಿವಾದಿ, ದಲಿತ ಮುಖಂಡ ತಿಪಟೂರಿನ ಟಿ.ಎ.ದಾಸಪ್ಪನವರಿಗೆ ಚಿತಾಭಸ್ಮ ತರುವ ಜವಾಬ್ದಾರಿ ವಹಿಸಿದರು.

ಗಾಂಧಿವಾದಿಯಾದರೂ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ದಾಸಪ್ಪನವರಂಥ ಹೋರಾಟಗಾರನಿಗೆ ಬೇರೆಲ್ಲಾ ರಾಜ್ಯಗಳ ರಾಜ್ಯಪಾಲರ ಜೊತೆ ಕರ್ನಾಟಕದ ಪ್ರತಿನಿಧಿಯಾಗಿ ಜಯಪ್ರಕಾಶ್ ನಾರಾಯಣ್‌ರ ಚಿತಾಭಸ್ಮ ಸ್ವೀಕರಿಸುವ ಭಾಗ್ಯ ಒದಗಿ ಬಂತು. ಕೈಯಲ್ಲಿ ಹಣವಿಲ್ಲದಿದ್ದರೂ ಸ್ನೇಹಿತರೊಬ್ಬರ ನೆರವಿನಿಂದ ಬೆಂಗಳೂರಿಗೆ ಬಂದ ಈ ದಲಿತ ನಾಯಕನನ್ನು ಆಗ ರಾಜ್ಯಪಾಲರಾಗಿದ್ದ ಗೋವಿಂದ ನಾರಾಯಣ್ ರೈಲ್ವೇ ನಿಲ್ದಾಣಕ್ಕೆ ತಾವೇ ಖುದ್ದಾಗಿ ಬಂದು ಸ್ವಾಗತಿಸಿದ್ದರು.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top