ಕೋವಿಡ್ ಲಸಿಕೆ ಜನರಿಗೆ ತಲುಪಿಸಲು ಖಾಸಗಿಯವರ ಸಹಾಯ ಪಡೆಯಿರಿ ಅಜಿಂ ಪ್ರೇಮ್ ಜಿ ಹೇಳ್ತಿರೋದರ ಹಿಂದಿನ ಉದ್ದಶೇನು?
ಕೋವಿಡ್ ಲಸಿಕೆಯೇನೋ ಕಂಡು ಹಿಡಿದಾಗಿದೆ. ಆದರೆ ಅದು ಬಹುಬೇಗನೆ ಜನರಿಗೆ ತಲುಪುತ್ತಿಲ್ಲ. ದಯವಿಟ್ಟು ಆದಷ್ಟು ಬೇಗ ಎಲ್ಲರಿಗೂ ತಲುಪಿಸಿ. ಸರ್ಕಾರ ಒಂದರಿಂದಲೇ ಎಲ್ಲರಿಗೂ ಲಸಿಕೆ ತಲುಪಿಸೋದು ಕಷ್ಟದ ಕೆಲಸ. ಹಾಗಾಗಿ ಖಾಸಗಿಯವರ ಸಹಾಯ ಪಡೆಯಿರಿ – ಇದು ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜಿಂ ಪ್ರೇಮ್ ಜಿ ಕೇಂದ್ರ ಸರ್ಕಾರಕ್ಕೆ ನೀಡಿರುವಂಥ ಸಲಹೆ. ಹೀಗೆ ಮಾಡಿದರೆ ಸುಮಾರು ಐವತ್ತು ಕೋಟಿಯಷ್ಟು ಲಸಿಕೆಯನ್ನು ಕೇವಲ ಎರಡೇ ತಿಂಗಳಲ್ಲಿ ಇಡೀ ದೇಶಕ್ಕೇ ತಲುಪಿಸಬಹುದು ಅಂತ ಅವರು ಹೇಳ್ತಿದ್ದಾರೆ.
ನಾನು ಹೇಳ್ತಿರೋದು ಪ್ರ್ಯಾಕ್ಟಿಕಲ್ ಆಗೇ ಇದೆ. ದಯವಿಟ್ಟು ಸರ್ಕಾರ ಅದನ್ನು ಅಳವಡಿಸಿಕೊಳ್ಳಬೇಕು ಅಂತ ಒತ್ತಿ ಹೇಳುವ ಮೂಲಕ ತಾನು ಹೇಗೆ ಈ ಯೋಜನೆಯಲ್ಲಿ ತಲೆಹಾಕಬಹುದು ಅಂತ ಅಜಿಂ ಪ್ರೇಮ್ ಜಿ ಎಂಬ ಬಹುದೊಡ್ಡ ಕಾರ್ಪೊರೇಟ್ ಕುಳ ಯೋಚನೆ ಮಾಡುತ್ತಿದ್ದಾನೆ. ಹಾಗೆ ಮಾಡಿದರೆ ಮುಂದಿನ ಲಸಿಕೆಯನ್ನುತಾನೇ ಉತ್ಪಾದಿಸುತ್ತೀನಿ ಅಂತ ಬೇಡಿಕೆ ಇಡುತ್ತಾನೆ. ಇಲ್ಲ ಲಾಬಿ ಮಾಡುತ್ತಾನೆ. ಇವೆಲ್ಲಾ ದೊಡ್ಡ ಕಾರ್ಪೊರೇಟ್ ಕುಳಗಳ ಲೆಕ್ಕಾಚಾರ.
ಪ್ರೇಮ್ ಜಿ ಪ್ರಕಾರ ಸರ್ಕಾರ ಅತ್ಯಂತ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಸೆರಂ ಇನ್ಸ್ ಟಿಟ್ಯೂಟ್ ಕಡೆಯಿಂದ ಕೇವಲ ಮುನ್ನೂರು ರುಪಾಯಿಯಲ್ಲಿ ಲಸಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಸರ್ಕಾರ ಹೊಂದಿದೆ. ಆದರೆ ಆಸ್ಪತ್ರೆಯವರು ಇದಕ್ಕೆ ಒಂದು ನೂರು ರೂಪಾಯಿಯಾದರು ಲಾಭವನ್ನು ಇಟ್ಟುಕೊಳ್ಳಬೇಕಲ್ಲವೇ. ಹೀಗಾಗಿ ನಾಲ್ಕು ನೂರು ರೂಪಾಯಿಗೆ ಜನರಿಗೆ ಲಸಿಕೆಯನ್ನು ಪೂರೈಸ. ಆದರೆ ಸರ್ಕಾರ ಇದನ್ನು ಪರಿಗಣಿಸುತ್ತೋ ಇಲ್ಲವೋ ಗೊತ್ತಿಲ್ಲ ಅಂತಾರೆ ಅಜಿಂ ಪ್ರೇಮ್ ಜಿ.