ಚೀನಾದಿಂದ ಬಂಧಿಸಲ್ಪಟ್ಟಿದ್ದ ಐವರು ಭಾರತೀಯರು ಬಿಡುಗಡೆ

in ಲೀಡ್ ನ್ಯೂಸ್
  • ಅರುಣಾಚಲ ಪ್ರದೇಶದ ಗಡಿ ಹಳ್ಳಿಯಲ್ಲಿ ಚೀನಾದ ಸೈನಿಕರ ಕೈಗೆ ಸಿಲುಕಿದ್ದ ಐವರು ಭಾರತೀಯ ಪ್ರಜೆಗಳು ಹಿಂದಿರುಗಿದ್ದಾರೆ. ಇಂದು ಮಧ್ಯಾಹ್ನ ಚೀನಾ ಅವರನ್ನು ಬಿಡುಗಡೆ ಮಾಡಿದೆ. ಪಿಎಲ್ಎ ಸೈನಿಕರೇ ಅವರನ್ನು ವಾಪಸ್ ಕರೆತಂದು ಬಿಟ್ಟು ಹೋಗಿದ್ದಾರೆ.
  • ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಕಿಬಿತು ಪ್ರದೇಶದ ಬಳಿಯ ವಾಚಾ ಎಂಬಲ್ಲಿ ಐವರನ್ನು ಹಸ್ತಾಂತರ ಮಾಡುವ ಕಾರ್ಯ ನಡೆದಿದೆ. ನಿಯಮಾನುಸಾರ ಭಾರತೀಯ ಸೇನೆಯು ಐವರನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
  • ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಶಿಷ್ಟಾಚಾರದ ಪ್ರಕಾರ ಆ ಐವರನ್ನು ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತದೆ. ಬಳಿಕ ಅವರವರ ಮನೆಗೆ ಕಳಿಸಿಕೊಡಲಾಗುತ್ತದೆ.
  • ಇದೇ ಸೆಪ್ಟೆಂಬರ್ 4ನೇ ತಾರೀಖಿನಂದು ಈ ಐವರು ಯುವಕರು ಕಾಣೆಯಾಗಿದ್ದರು. ಅವರನ್ನು ಚೀನಾದ ಸೈನಿಕರು ಕರೆದೊಯ್ದ ವಿಷಯ ತಿಳಿಯಿತು. ಐವರ ಜೊತೆಗೆ ಹೋಗಿದ್ದ ಇನ್ನಿಬ್ಬರು ಸುರಕ್ಷಿತವಾಗಿ ಹಿಂದಿರುಗಿದ್ದರು. ಅವರು ನೀಡಿದ ಮಾಹಿತಿಯ ಆಧಾರದ ಮೇರೆಗೆ ಕೇಂದ್ರ ಸಚಿವ ಕಿರೆನ್ ರಿಜುಜು ಚೀನಾ ಸರ್ಕಾರದ ಜೊತೆಗೆ ಮಾತುಕತೆ ನಡೆಸಿದರು. ಆರಂಭದಲ್ಲಿ ಚೀನಾ ಐವರ ಬಗ್ಗೆ ತನೇಗನೂ ಗೊತ್ತಿಲ್ಲ ಅಂತ ಹೇಳಿತಾದರೂ ಕಡೆಗೆ ಭಾರತದ ಒತ್ತಡಕ್ಕೆ ಮಣಿಯಲೇಬೇಕಾಯಿತು.

Leave a Reply

Your email address will not be published.

*

Latest from ಲೀಡ್ ನ್ಯೂಸ್

Go to Top