ಹಾಯ್ ಬೆಂಗಳೂರ್

ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದ ಹಲವೆಡೆ ರೈಲು ತಡೆದು ರೈತರ ಆಕ್ರೋಶ

ಕೃಷಿ ಕಾಯ್ದೆ ವಿರೋಧಿಸಿ ರೈತರ ಕಿಚ್ಚು ಮತ್ತೆ ತಾರಕಕ್ಕೇರಿದೆ. ಅದಕ್ಕೆ ಸಾಕ್ಷಿ ಇವತ್ತು ರಾಜ್ಯದ ಹಲವೆಡೆ ನಡೆಯುತ್ತಿರುವ ರೈಲ್ ರೋಕೋ ಚಳವಳಿ. ರೈಲು ತಡೆಯೋಕೆ ಹೊರಟಿದ್ದ ಉದ್ರಿಕ್ತ ರೈತರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಜೋರಾಗಿತ್ತು. ರೊಚ್ಚಿಗೆದ್ದ ಪೊಲೀಸರು ಪ್ರತಿಭಟನಾಕಾರರನ್ನು ಅಟ್ಟಾಡಿಸಿಕೊಂಡು ಹೋದರು. ಎಲ್ಲಿ ಏಟು ಬೀಳುತ್ತದೋ ಎಂಬ ಭಯದಲ್ಲಿ ಪ್ರತಿಭಟನಾಕೋರರು ಎದ್ದೆನೋ ಬಿದ್ದೆನೋ ಅಂತ ಅಲ್ಲಿಂದ ಕಾಲ್ಕಿತ್ತರು.

ಬೆಳಗಾವಿ, ಬಿಜಾಪುರ, ರಾಯಚೂರು, ಶಿವಮೊಗ್ಗ – ಹೀಗೆ ನಾನಾ ಕಡೆ ರೈತರು ರೈಲನ್ನು ತಡೆಯೋಕೆ ಅಂತ ಸಜ್ಜಾಗಿಯೇ  ಬಂದಿದ್ದರು. ಆದರೆ ಅವರನ್ನು ಪೊಲೀಸರು ಒಳಕ್ಕೆ ಬಿಟ್ಟುಕೊಳ್ಳಲಿಲ್ಲ. ಬ್ಯಾರಿಕೇಡ್ ಗಳನ್ನು ಅಡ್ಡಡ್ಡ ಇಟ್ಟಿದ್ದರು. ಉದ್ರಿಕ್ತಗೊಂಡಿದ್ದ ರೈತರು ಬ್ಯಾರಿಕೇಡ್ ಗಳನ್ನು ಮುರಿದು ಒಳಕ್ಕೆ ನುಗ್ಗಿ ಗಲಾಟೆ ಮಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಕಾಯ್ದೆ ವಿರೋಧಿಸಿ ರೈತರು ಹಲವು ತಿಂಗಳುಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಅದು ತಾರಕಕ್ಕೇರಿತ್ತು. ಇಡೀ ಪ್ರಪಂಚದ ಮುಂದೆ ನಮ್ಮ ದೇಶದ ಮಾನ ಮರ್ಯಾದೆ ಹರಾಜಾಗಿತ್ತು. ಖಂಡಿತವಾಗಿಯೂ ಅದು ರೈತರು ಮಾಡಿದ ಪ್ರತಿಭಟನೆಯಲ್ಲ. ರೈತರಿಗೆ ಆ ರೀತಿ ದಾಂಧಲೆ ಮಾಡಕೋಕೆ ಮನಸ್ಸು ಬರದಿಲ್ಲ. ಆದರೂ ಮಾಡಿದ್ದಾರೆ ಅಂದರೆ ಅವರು ಶುದ್ಧ ಗೂಂಡಾಗಳೇ ಇರಬೇಕು ಅಂತ ಜನರು ಮಾತಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *