ಹಾಯ್ ಬೆಂಗಳೂರ್

ಬೃಹತ್ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ಗೆ ಆರಂಭಿಕ ಆಘಾತ

ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸಂಪೂರ್ಣ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾರ ಭರ್ಜರಿ ಸೆಂಚುರಿಯಿಂದ 195ರನ್ ಗಳ ಭಾರಿ ಮುನ್ನಡೆ ಪಡೆದ ಭಾರತವು ಎರಡನೇ ಇನ್ನಿಂಗ್ಸ್ ನಲ್ಲಿ 286ರನ್ ಗಳನ್ನು ಗಳಿಸುವ ಮೂಲಕ  ಇಂಗ್ಲಿಷ್ ಪಡೆಗೆ 482ರನ್ ಗಳ ಟಾರ್ಗೆಟ್ ನೀಡಿದೆ.

482ರನ್ ಗಳ ಗುರಿಯನ್ನು ಬೆನ್ನತ್ತಿರುವ ಇಂಗ್ಲಿಷರು ಅದಾಗಲೇ 53 ರನ್ ಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದಾರೆ. ಇನ್ನೂ ಎರಡು ದಿನಗಳ ಸುದೀರ್ಘ ಅವಧಿ ಇದೆ. ತಾಳ್ಮೆಯಿಂದ ನೆಲ ಕಚ್ಚಿಕೊಂಡು ಭಾರತದ ಬೌಲರ್ ಗಳನ್ನು ಎದುರಿಸಿ ಗುರಿ ತಲುಪುವ ಸಾಧ್ಯತೆಗಳಂತೂ ಇದೆ.

ಆದರೆ ಮೂರು ವಿಕೆಟ್ ಕಳೆದುಕೊಂಡಿರುವುದನ್ನು ನೋಡಿದರೆ ಗೆಲ್ಲೋದು ಕಷ್ಟ ಅಂತ ಅನಿಸುತ್ತಿದೆ. ಒಂದೇ ಒಂದು ಗಟ್ಟಿಯಾದ ಜೊತೆಯಾಟ ಬಂದು ಬಿಟ್ಟರೆ ಗೆದ್ದರೂ ಗೆಲ್ಲಬಹುದು. ಇದು ಕ್ರಿಕೆಟ್, ಯಾವುದನ್ನು ಹೀಗೇ ಅಂತ ಹೇಳಲು ಆಗದು.

Leave a Reply

Your email address will not be published. Required fields are marked *