ಹಾಯ್ ಬೆಂಗಳೂರ್

ಈಕೆಯ ಹೋರಾಟ ಅದ್ಭುತ

ಈಕೆಯ ಹೋರಾಟ ಅದ್ಭುತ

ವಿಶ್ವದ ದೊಡ್ಡಣ್ಣ ಎಂಬ ಭ್ರಮೆಯಲ್ಲಿರುವ ಅಮೆರಿಕಾ ಭಾರತಕ್ಕೆ ರಫ್ತು ಮಾಡುವ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ವಿರೋಧಿಸಿ ಇತ್ತೀಚಿಗೆ ನಮ್ಮಲ್ಲಿ ಸಹಜ ಕೃಷಿ, ಪಾಳೇಕರ್ ಕೃಷಿ ಪದ್ಧತಿ ಮುಂತಾದವುಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡುತ್ತಿದೆಯಾದರೂ, ಕೃಷಿಯಲ್ಲಿ ಬಳಸುವ ರಾಸಾಯನಿಕಗಳ ಬಗ್ಗೆ ೧೯೪೦ರಲ್ಲೇ ಹೋರಾಟ ನಡೆಸಿದ ಧೀಮಂತ ಮಹಿಳೆಯ ಹೆಸರು ರಾಶೆಲ್ ಕರ್ಸನ್!

ಮೂಲತಃ ಪ್ರಾಣಿಶಾಸ್ತ್ರದ ಪದವೀಧರಳಾಗಿದ್ದ ರಾಶೆಲ್ ಅಲ್ಲಿನ ಮೀನುಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಳು. ಬರವಣಿಗೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಕಾರಣ ಅಧ್ಯಯನ ನಡೆಸಿ ಜಲಚರಗಳು ಹಾಗೂ ಮಾನವನ ಕಾರಣದಿಂದ ಉಂಟಾಗುತ್ತಿರುವ ಜಲ ಮಾಲಿನ್ಯದ ಬಗ್ಗೆ ಕೃತಿಗಳನ್ನು ರಚಿಸಿದಳು. ನಂತರ ಈಕೆ ಅಮೆರಿಕಾ ಹಾಗೂ ಬ್ರಿಟನ್‌ಗಳಲ್ಲಿ ಕೀಟನಾಶಕವನ್ನಾಗಿ ಬಳಸುತ್ತಿದ್ದ ಡಿಡಿಟಿಯ ಬಗ್ಗೆ ಅಧ್ಯಯನಕ್ಕಾಗಿ ಮುಂದಾದಳು. ಆಧುನಿಕತೆಯತ್ತ ಮುನ್ನುಗುತ್ತಿದ್ದ ಅಮೆರಿಕಾದಲ್ಲಿ ಈಕೆ ಡಿಡಿಟಿ ಬಳಕೆಯಿಂದ ಆಗುವ ಕೆಡಕುಗಳ ಬಗ್ಗೆ ಎತ್ತಿದ ಧ್ವನಿಗೆ ಆರಂಭದಲ್ಲಿ ಬೆಂಬಲ ಸಿಗಲಿಲ್ಲ. ೧೯೬೨ರಲ್ಲಿ ಆ ಬಗ್ಗೆ ಬರೆದ `ಸೈಲಂಟ್ ಸ್ಟ್ರಿಂಗ್’ ಕೃತಿಯ ಬಗ್ಗೆ ಜಗತ್ತಿನೆಲ್ಲೆಡೆ ವ್ಯಾಪಕ ಚರ್ಚೆಗಳಾದವು. ಇದನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ಹಾಗೂ ರಾಸಾಯನಿಕ ಉದ್ಯಮಗಳು ಇನ್ನಿಲ್ಲದ ಪ್ರಯತ್ನ ನಡೆಸಿದವಾದರೂ, ಕೊನೆಗೆ ಕೃಷಿಯಲ್ಲಿ ಡಿಡಿಟಿ ಬಳಕೆಯನ್ನು ನಿಷೇಧಿಸಲೇ ಬೇಕಾಯಿತು. ಕ್ಯಾನ್ಸರ್ ಪೀಡಿತೆಯಾಗಿದ್ದ ರಾಶೆಲ್ ಕರ್ಸನ್ ಅಲ್ಲಿನ ಪ್ರಭುತ್ವ ತನ್ನ ವಿರುದ್ಧ ನಡೆಸಿದ ಅಪಪ್ರಚಾರ ಹಾಗೂ ಕಾನೂನು ಸಮರಗಳನ್ನು ಎದುರಿಸಿ ಕೃಷಿ ಪ್ರಪಂಚದ ಬದಲಾವಣೆಗೆ ಕೈಗೊಂಡ ಹೋರಾಟ ಅವಿಸ್ಮರಣೀಯ.

Leave a Reply

Your email address will not be published. Required fields are marked *