ಹಾಯ್ ಬೆಂಗಳೂರ್

ಈ ಇಲಾಖೆಗಳಲ್ಲಿ ಫೋನ್ ರಿಸೀವ್ ಮಾಡಲಾರದ ದಂಡಪಿ0ಡಗಳಿದ್ದಾರೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರದ ವತಿಯಿಂದ ವಿವಿಧ ಇಲಾಖೆಗಳಡಿಯಲ್ಲಿ ವಿದ್ಯಾರ್ಥಿ ವೇತನ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡುವ ಸಲುವಾಗಿ ಸರ್ಕಾರದ ಆಯಾ ಆಯಾ ಸಮಯದಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಆದರೆ ಈ ಬಗ್ಗೆ ಸಂಬ0ಧಪಟ್ಟ ಮಾಹಿತಿ ಕೇಳಲು ಈ ಇಲಾಖೆಗಳ ದೂರವಾಣಿ ನಂಬರ್‌ಗಳಿಗೆ ಕರೆ ಮಾಡಿದರೆ ಕೆಲವೊಂದು ಸ್ವಿಚ್ ಆಫ್, ನಾಟ್ ರಿಚೇಬಲ್. ಮತ್ತೆ ಕೆಲವು ರಿಂಗಾಣಿಸಿದರೂ ಉತ್ತರಿಸುವರಿಲ್ಲ. ಇಲ್ಲಿ ಉದ್ಯೊಗಿಗಳಿದ್ದಾರೋ, ಇಲ್ಲವೋ ಗೊತ್ತಿಲ್ಲ. ಉದ್ಯೋಗಿಗಳಿದ್ದರೂ ಸಾರ್ವಜನಿಕರ ಕರೆಗಳಿಗೆ ಸ್ಪಂದಿಸದೇ 0ಟೈಮ್‌ಪಾಸ್ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಇಲಾಖೆಗಳ ಮೇಲಾಧಿಕಾರಿಗಳು ಹಾಗೂ ಈ ಮೇಲ್ಕಂಡ ಇಲಾಖೆಗಳ ಸಚಿವರೂ ಈ ಬಗ್ಗೆ ಗಮನ ಹರಿಸಬೇಕಾಗಿದೆ.

Leave a Reply

Your email address will not be published. Required fields are marked *